ಬಳ್ಳಾರಿ:
ರಾಜ್ಯದಲ್ಲಿ 2ನೇ ಹಂತದ ಚುನಾವಣೆ ಆರಂಭವಾಗಿದ್ದು, ಜಿಲ್ಲೆಯಲ್ಲಿ ಹಸೆಮಣೆ ಏರುವ ಮುನ್ನವೇ ತಮ್ಮ ಮತದಾನದ ಹಕ್ಕು ಚಲಾಯಿಸಿ ನವ ವಧುವೊಬ್ಬರು ಮತಗಟ್ಟೆಯ ಗಮನ ಸೆಳೆದಿದ್ದಾರೆ.
ಟಿ.ರಮಾ ಮಧುವೆಗೂ ಮುನ್ನವೇ ವಧುವಿನ ಅಲಂಕಾರದಲ್ಲೆ ಮತಗಟ್ಟೆಗೆ ಬಂದು ವಿಜಯನಗರ ವಿಧಾನಸಭೆ ಕ್ಷೇತ್ರದ ಮಲಪನಗುಡಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 219 ರಲ್ಲಿ ಮತ ಚಲಾಯಿಸಿದ್ದಾರೆ.
ಬಳ್ಳಾರಿ ಜಿಲ್ಲೆಯ ತಂಬ್ರಹಳ್ಳಿ ಸಮೀಪದ ಅಯ್ಯನಹಳ್ಳಿಯಲ್ಲಿ ರಮಾಗೆ ಮದುವೆ ನಿಶ್ಚಯವಾಗಿದೆ. ಮದುವೆ ಮಂಟಪಕ್ಕೆ ತೆರಳುವ ಮುನ್ನ ಮತಗಟ್ಟೆಗೆ ತೆರಳಿ ಹಕ್ಕು ಚಲಾಯಿಸಿ, ನಂತರ ಕುಟುಂಬ ಸದಸ್ಯರೊಂದಿಗೆ ಮದುವೆ ಮಂಟಪಕ್ಕೆ ತೆರಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
