ಬೆಂಗಳೂರು :
ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಬಿ.ಎಸ್.ಯಡಿಯೂರಪ್ಪ ಅವರಿಗೆ ಸಚಿವ ಸಂಪುಟ ರಚನೆಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದು, ಸಚಿವ ಸಂಪುಟ ವಿಸ್ತರಣೆಗೆ ಡೇಟ್ ಫಿಕ್ಸ್ ಮಾಡಲಾಗಿದೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು, ಯಡಿಯೂರಪ್ಪ ಅವರಿಗೆ ಕರೆಮಾಡಿ ಆಗಸ್ಟ್ 9 ರಂದು ಸಚಿವ ಸಂಪುಟ ರಚನೆಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ ಹಾಗೂ ಸಂಪುಟ ರಚನೆಗೂ ಮುನ್ನ ಆಗಸ್ಟ್ 7 ರಂದು ದೆಹಲಿಗೆ ಬರುವಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಈಗಾಗಲೇ ಅಮಿತ್ ಶಾ ಜಿಲ್ಲಾವಾರು ಶಾಸಕರ ರಿಪೋರ್ಟ್ ಗಳನ್ನು ತರಿಸಿಕೊಂಡಿದ್ದಾರೆ. ಸಚಿವ ಸಂಪುಟ ಸೇರಲಿರುವವರ ಪಟ್ಟಿಯನ್ನು ಅಮಿತ್ ಶಾ ಸಿದ್ದಪಡಿಸಿದ್ದು, ಈ ಮೂಲಕ ಯಡಿಯೂರಪ್ಪನವರ ಕೈಯಲ್ಲಿರುವ ಎರಡು ಪಟ್ಟಿಗಳನ್ನು ತಾಳೆ ಮಾಡಿ ಫೈನಲ್ ಲಿಸ್ಟ್ ಸಿದ್ಧಗೊಳಿಸಲಿದ್ದಾರೆ. ಆ ಪಟ್ಟಿ ಪ್ರಕಾರವೇ ಸಚಿವ ಸಂಪುಟ ವಿಸ್ತರಣೆ ಮಾಡುವಂತೆ ಖಡಕ್ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ