ಬೇಲೂರು : ಅಕ್ರಮ ಕಸಾಯಿ ಖಾನೆಗಳ ಮೇಲೆ ತಹಶೀಲ್ದಾರ್ ದಾಳಿ

ಬೇಲೂರು:

      ಅನಧಿಕೃತವಾಗಿ ಗೋಮಾಂಸ ಮಾರಾಟ ಮಾಡುತ್ತಿದ್ದ ಕಸಾಯಿ ಖಾನೆ ಮೇಲೆ ತಹಶೀಲ್ದಾರ್ ಎಂ.ಮಮತ ಈಚೆಗೆ ದಾಳಿ ನಡೆಸಿದರು.

   ಈ ಹಿಂದೆಯೂ ಪುರಸಭೆಯಿಂದ ಗೋಮಾಂಸ ಮಾರಾಟ ನಡೆಯುವ ಕಸಾಯಿಖಾನೆ ಮೇಲೆ ದಾಳಿ ನಡೆಸಿ, ಕಠಿಣ ಎಚ್ಚರಿಕೆ ನೀಡಿ, ಕೇಸು ದಾಖಲಿಸಿದರು ಕೂಡ ಈ ಕೃತ್ಯ ಮುಂದುವರಿಯುತ್ತಿದೆ, ಇನ್ನು ಮುಂದೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಬೇಲೂರಿನಲ್ಲಿ ಇಂತಹ ಕೃತ್ಯಗಳು ನಡೆಯದಂತೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮಮತ ಎಚ್ಚರಿಕೆ ನೀಡಿದರು.

   ಪುರಸಭೆ ಮುಖ್ಯಾಧಿಕಾರಿ ಸುಜಯ್ ಕುಮಾರ್ ಮಾತನಾಡಿ, ಅಕ್ರಮವಾಗಿ ಗೋಮಾಂಸ ಮಾರಾಟ ಮಾಡುವ ಅಂಗಡಿಗಳ ಮೇಲೆ ದಾಳಿ ನಡೆಸಿ, ನಾಲ್ಕು ಟನ್ ಗೋಮಾಂಸ ವಶಪಡಿಸಿಕೊಳ್ಳಲಾಗಿದೆ, ಪ್ರಕರಣವನ್ನು ದಾಖಲಿಸಲಾಗಿದೆ. ಆದರೂ ಸಹ ಕೆಲವರು ಕದ್ದು ಮುಚ್ಚಿ ಮಾರಾಟ ಮಾಡುತ್ತಿದ್ದಾರೆ. ಅಕ್ರಮವಾಗಿ ಗೋಮಾಂಸ ಮಾರಾಟ ಮಾಡುವುದು ಕಂಡುಬಂದರೆ ಅವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ತಿಳಿಸಿದರು.

Recent Articles

spot_img

Related Stories

Share via
Copy link
Powered by Social Snap