ಬೆಂಗಳೂರು:
ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ತಮ್ಮ 1 ವರ್ಷದ ದೇಣಿಗೆ ನೀಡುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಬುಧವಾರ ಘೋಷಿಸಿದ್ದಾರೆ.
ಟ್ವೀಟ್ ಮೂಲಕ ಮಾಹಿತಿ ನೀಡಿರುವ ಅವರು, ಕೊರೊನಾ ಸಂಟಕದಿಂದ ಪಾರಾಗಲು ಸರ್ಕಾರ ಸಾಕಷ್ಟು ರೀತಿಯ ತೀರ್ಮಾನವನ್ನು ತೆಗೆದುಕೊಂಡಿದೆ. ತುರ್ತು ಪರಿಹಾರಕ್ಕಾಗಿ ಹಣ ವ್ಯಯಿಸಬೇಕಾಗಿದೆ. ಹೀಗಾಗಿ ಈ ನಿರ್ಧಾರವನ್ನು ತೆಗೆದುಕೊಂಡಿರುವುದಾಗಿ ಅವರು ತಿಳಿಸಿದ್ದಾರೆ.
#ಕೊರೊನ ಸೋಂಕು ವಿರುದ್ಧದ ಹೋರಾಟಕ್ಕೆ ನನ್ನ ಒಂದು ವರ್ಷದ ಸಂಬಳವನ್ನು 'ಮುಖ್ಯಮಂತ್ರಿಗಳ ಪರಿಹಾರ ನಿಧಿ ಕೋವಿಡ್-19' ಕ್ಕೆ ನೀಡುತ್ತಿದ್ದೇನೆ. ಸಚಿವರು, ಶಾಸಕರು, ಸಂಸದರು, ಅಧಿಕಾರಿಗಳು ಹಾಗೂ ಸಾರ್ವಜನಿಕರು ತಮ್ಮ ಕೈಲಾದ ಮಟ್ಟಿಗೆ ದೇಣಿಗೆ ನೀಡಿ ಈ ಹೋರಾಟಕ್ಕೆ ಬಲ ತುಂಬಬೇಕು ಎಂದು ಮನವಿ ಮಾಡುತ್ತೇನೆ.@BSYBJP #DonatetoCMRFCovid19 pic.twitter.com/GXuzVTuaua
— CM of Karnataka (@CMofKarnataka) April 1, 2020
ಕೊರೊನಾ ಸೋಂಕು ಬೇರೆ ಬೇರೆ ರೀತಿಯಲ್ಲಿ ಜನರ ಜೀವನದ ಮೇಲೆ ಪರಿಣಾಮ ಬೀರುತ್ತಿದೆ. ಪರಿಹಾರ ಕಾರ್ಯಗಳಲ್ಲಿ ಸಾರ್ವಜನಿಕರೂ ಕೂಡ ಸಹಾಯ ಹಸ್ತ ಚಾಚಬೇಕು. ಇದೇ ವೇಳೆ ಸಂಸದರು ಶಾಸಕರು ಅಧಿಕಾರಿಗಳು ಹಾಗೂ ದಾನಿಗಳು ಮುಂದೆ ಬಂದು ಇಂತಹ ಸಂಕಷ್ಟ ಸಂದರ್ಭದಲ್ಲಿ ತಮ್ಮ ಕೈಲಾದ ನೆರವನ್ನು ನೀಡಬೇಕು ಎಂದು ಅವರು ಇದೇವೇಳೆ ಮನವಿ ಮಾಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
