ಹಾಸನ:
ಯಡಿಯೂರಪ್ಪನವರೇ ನೀವೂ ಡಿಸಿಎಂ, ಸಿಎಂ ಆಗಿದ್ದಾಗ ನಾಡಿನ ರೈತರ ಸಾಲ ಮನ್ನಾ ಮಾಡಿದ್ದೀರಾ, ಒಮ್ಮೆಯೂ ಸಾಲ ಮನ್ನಾ ಮಾಡದ ನಿಮಗೆ ಮನ್ನಾ ಮಾಡುವಂತೆ ಒತ್ತಾಯ ಮಾಡುವ ನೈತಿಕತೆ ಇಲ್ಲ ಎಂದು ಸಿಎಂ ಕುಮಾರ ಸ್ವಾಮಿ ಹೇಳಿದ್ದಾರೆ.
ನಿಮ್ಮಿಂದ ಉಪದೇಶದ ಅಗತ್ಯ ನನಗಿಲ್ಲ. ಅಂತಹ ಪರಿಸ್ಥಿತಿ ನನಗೆ ಬಂದರೆ ರಾಜಕೀಯದಿಂದಲೇ ನಿವೃತ್ತಿಯಾಗುತ್ತೇನೆ ಎಂದರು. ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಬಳಿಕ ಕುಮಾರಸ್ವಾಮಿ ಮಾತನಾಡಿ ವಿಪಕ್ಷ ಬಿಜೆಪಿ ವಿರುದ್ದ ಹರಿಹಾಯ್ದರು.
ಸಾಲಭಾದೆಯಿಂದ ಮಂಡ್ಯದ ಕುಟುಂಬ ಆತ್ಮಹತ್ಯೆ ಮಾಡಿರುವುದು ನನಗೆ ಆಘಾತ ತಂದಿದೆ.ನನ್ನ ಕುಟುಂಬ ಸದಸ್ಯರನ್ನು ಕಳೆದುಕೊಂಡ ಭಾವನೆ ನನ್ನ ಮನಸ್ಸಿನಲ್ಲಿದೆ ಎಂದರು.
ಹಾಸನ ಜಿಲ್ಲೆಯ 533 ಕೋಟಿ ಚಾಲ್ತಿ ಸಾಲದಲ್ಲಿ 512 ಕೋಟಿ ಸಾಲ ಮನ್ನಾ ಆಗಲಿದೆ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ 330 ಕೋಟಿ ಸಾಲ ಮನ್ನಾ ಆಗಿತ್ತು. ಸಿದ್ದರಾಮಯ್ಯ ಅವರಿಗಿಂತ ಹೆಚ್ಚಿನ ಮೊತ್ತದ ಸಾಲ ಮನ್ನಾ ಲಾಭ ಸಿಕ್ಕಿದೆ ಎಂದು ಹೇಳಿದರು.
ಇಂದು 1650 ಕೋಟಿ ವೆಚ್ಚದ ಯೋಜನೆಗಳಿಗೆ ಚಾಲನೆ ಕೊಟ್ಟಿದ್ದೇವೆ.ಮೂರು ದಿನದ ಹಿಂದೆ ಚನ್ನರಾಯಪಟ್ಟಣದಲ್ಲಿ 750 ಕೋಟಿ ವೆಚ್ಚದ ಯೋಚನೆಗೆ ಶಂಕುಸ್ಥಾಪನೆ ಆಗಿದೆ ಇದು ರಾಜ್ಯಾದ್ಯಂತ ನಡೆಯಲಿದೆ ಎಂದು ಹೆಚ್‌ಡಿಕೆ ಹೇಳಿದರು.
ಕಳೆದ 12 ವರ್ಷಗಳಿಂದ ಹಾಸನವನ್ನು ಕಡೆಗಣಿಸಲಾಗಿತ್ತು. ಇಂದು ಇಷ್ಟು ದೊಡ್ಡ ಮೊತ್ತದ ಯೋಜನೆ ಜಾರಿ ಮಾಡಲು ನನಗೆ ಯಾವುದೇ ಅಂಜಿಕೆ ಇಲ್ಲ ಎಂದರು.
ಜಿಲ್ಲಾ ಕ್ರೀಡಾಂಗಣದಲ್ಲಿ ಸಾವಿರಾರು ಕೋಟಿ ವೆಚ್ಚದ ಯೋಜನೆಗೆ ಚಾಲನೆ ನೀಡಿ ಮಾತನಡಿದ ಸಿಎಂ, ಕಾರ್ಯಕ್ರಮಕ್ಕೆ ಆಗಮಿಸದ ಹಾಸನ ಬಿಜೆಪಿ ಶಾಸಕ ಪ್ರೀತಂಗೌಡ ಅವರ ಕಾಲೆಳೆದರು. ಪಾಪ ಅವರು ತುಂಬಾ ಬ್ಯುಸಿಯಾಗಿದ್ದಾರೆ. ಅವರು ಮತ್ತು ಅವರ ನಾಯಕರು ಈ ಸರಕಾರವನ್ನು ಹೇಗೆ ತೆಗೆಯಬೇಕೆಂಬ ಚಿಂತೆಯಲ್ಲಿದ್ದಾರೆ ಎಂದರು.
ಕುಮಾರಸ್ವಾಮಿ ಹಾಸನದಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆ ವತಿಯಿಂದ ರೂ.1653 ಲಕ್ಷಗಳ ವೆಚ್ಚದಲ್ಲಿ ವೈದ್ಯಕೀಯ ಶಿಕ್ಷಣಕ್ಕೆ ಸಂಬಂಧಿಸಿದ ಕಟ್ಟಡಗಳ ಶಂಕುಸ್ಥಾಪನೆ ನೆರವೇರಿಸಿದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ