ಕ್ವಿಂಟಾಲ್ ಗೆ 40 ಸಾವಿರ ದಾಟಿದ ಬ್ಯಾಡಗಿ ಮೆಣಸಿನಕಾಯಿ!!

ಹಾವೇರಿ :

      ಬ್ಯಾಡಗಿ ಮೆಣಸಿನ ಕಾಯಿ ಬೆಳೆಗಾರರಿಗೆ ಬಂಪರ್ ಸುದ್ದಿಯೊಂದು ಸಿಕ್ಕಿದ್ದು, ಕ್ವಿಂಟಾಲ್ ಗೆ 40 ಸಾವಿರ ರೂಪಾಯಿ ತಲುಪಿದೆ.

      ಬೆಂಗಳೂರು ಯಶವಂತಪುರ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕಳೆದ ತಿಂಗಳು 15 ಸಾವಿರ ರೂ. ಇದ್ದ ಮೆಣಸಿನಕಾಯಿ ಬೆಲೆ ಸೋಮವಾರ 40 ಸಾವಿರ ರೂ.ಗೆ ತಲುಪಿದೆ. ರಾಜ್ಯದ ವಿವಿಧ ಭಾಗಗಳಿಂದ ಮತ್ತು ಹೊರ ರಾಜ್ಯಗಳಿಂದ ಮಾರುಕಟ್ಟೆಗೆ ಕಡಿಮೆ ಪ್ರಮಾಣದಲ್ಲಿ ಮೆಣಸಿನ ಕಾಯಿ ಬಂದಿರುವುದು ಬೆಲೆ ಹೆಚ್ಚಳಕ್ಕೆ ಕಾರಣ ಎನ್ನಲಾಗಿದೆ.

       ಇನ್ನು ಹಾವೇರಿ ಮಾರುಕಟ್ಟೆಯಲ್ಲಿ ಡಬ್ಬಿ ಮೆಣಸಿನಕಾಯಿ ಕ್ವಿಂಟಾಲ್ ಗೆ ಗರಿಷ್ಠ 20 ಸಾವಿರ ರೂ., ಕಡ್ಡಿ ಮೆಣಸಿನಕಾಯಿ ಕ್ವಿಂಟಾಲ್ ಗೆ 22 ಸಾವಿರ, ಗುಂಟೂರು ಮೆಣಸಿನಕಾಯಿ ಕ್ವಿಂಟಾಲ್ ಗೆ 10 ಸಾವಿರ ರೂ.ಗೆ ಮಾರಾಟವಾಗಿದ್ದು, ಮುಂದಿನ ದಿನಗಳಲ್ಲಿ ಬೆಲೆ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ.

      ರಾಜ್ಯದಲ್ಲಿ ಅಂದಾಜು 1.2 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮೆಣಸಿನಕಾಯಿ ಬೆಳೆಯಲಾಗುತ್ತದೆ. ಕಳೆದ ವರ್ಷ ಸತತ ಮಳೆಯಿಂದಾಗಿ ಹಾವೇರಿ, ಗದಗ, ಧಾರವಾಡ ಹಾಗೂ ಬಳ್ಳಾರಿ ಜಿಲ್ಲೆಯ 40 ಸಾವಿರಕ್ಕೂ ಅಧಿಕ ಹೆಕ್ಟೇರ್ ಪ್ರದೇಶದಲ್ಲಿ ಮೆಣಸಿನಕಾಯಿ ಬೆಳೆ ಹಾನಿಯಾಗಿದೆ. ಹಾಗಾಗಿ ಹೆಚ್ಚು ಉತ್ಪನ್ನ ಇಲ್ಲದ ಕಾರಣ ಮಾರುಕಟ್ಟೆಗೆ ಆವಕ ಪ್ರಮಾಣವೂ ಇಳಿಕೆಯಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap