ತಿತ್ಲಿ ಚಂಡಮಾರುತಕ್ಕೆ ಆಂಧ್ರದ 8 ಜನ ಬಲಿ

ಹೈದರಾಬಾದ್‌ : 

      ಆಂಧ್ರಪ್ರದೇಶ ಮತ್ತು ಒಡಿಶಾಕ್ಕೆ ಅಪ್ಪಳಿಸಿರುವ ತಿತ್ಲಿ ಚಂಡಮಾರುತಕ್ಕೆ ಆಂಧ್ರದಲ್ಲಿ 8 ಮಂದಿ ಮೃತರಾಗಿದ್ದಾರೆಂಬ ಮಾಹಿತಿ ಲಭ್ಯವಾಗಿದೆ. ಆಂಧ್ರದ ಶ್ರೀಕಾಕುಲಂ ಮತ್ತು ವಿಜಯನಗರಂ ಜಿಲ್ಲೆಗಳಲ್ಲಿ ಎಂಟು ಮಂದಿ ಮೃತರಾಗಿದ್ದು, ತಿತ್ಲಿ ಅಬ್ಬರ ಇನ್ನೂ ಕಡಿಮೆಯಾಗಿಲ್ಲ.

      ಈ ಭಾಗಗಳಲ್ಲಿ ವಿದ್ಯುತ್ ವ್ಯತ್ಯಯವಾಗಿದ್ದು, ಸಾರ್ವಜನಿಕ ಜನಜೀವನ ಅಸ್ತವ್ಯಸ್ತವಾಗಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಉಂಟಾಗಿರುವ ತಿತ್ಲಿ ಚಂಡಮಾರುತದಿಂದ ಮುನ್ನೆಚ್ಚರಿಕೆ ವಹಿಸುವಂತೆ ಇದುವರೆಗೂ 3 ಲಕ್ಷಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.

      ಆಂಧ್ರ ಪ್ರದೇಶದ ಶ್ರೀಕಾಕುಳಂ ಜಿಲ್ಲೆಯಲ್ಲಿ ತಿತ್ಲಿ ಚಂಡಮಾರುತದ ಪ್ರಭಾವದಲ್ಲಿ  2 ಸಿಎಂ ನಿಂದ 26 ಸಿಎಂ ಮಳೆ  ಸುರಿದಿದೆ. ರಸ್ತೆ ಸಂಪರ್ಕ ಜಾಲ ತೀವ್ರವಾಗಿ ಬಾಧಿತವಾಗಿದೆ. 

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap