ಬೆಂಗಳೂರು:
ಎಂಟರಿಂದ ಹತ್ತು ದಿನಗಳ ಒಳಗೆ ಸಚಿವ ಸಂಪುಟ ವಿಸ್ತರಣೆ ಮಾಡುವ ಆಲೋಚನೆಯಲ್ಲಿದ್ದೇವೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ತಿಳಿಸಿದ್ದಾರೆ.
ಇಂದು ವಿಧಾನಸೌಧದಲ್ಲಿ ಮಾತನಾಡಿದ ಅವರು, ಗೃಹ ಸಚಿವ ಅಮಿತ್ ಶಾ ಅವರು ರಾಜ್ಯಕ್ಕೆ ಬರಲಿದ್ದು, ಅಮಿತ್ ಶಾ ಜನವರಿ 18ರಂದು ರಾಜ್ಯಕ್ಕೆ ಬರುವ ಸಾಧ್ಯತೆಯಿದೆ. ಅವರ ಆಗಮನಕ್ಕೂ ಮುನ್ನ ಅವರನ್ನು ಭೇಟಿಯಾಗಿ ಈ ಬಗ್ಗೆ ಮಾತನಾಡುವೆ. ಮಾತುಕತೆ ನಂತರ ಸಂಪುಟ ವಿಸ್ತರಣೆಗೆ ಮುಹೂರ್ತ ಫಿಕ್ಸ್ ಮಾಡ್ತೇವೆ. ಜನವರಿ 20 ರಂದು ಸ್ವಿಜರ್ಲ್ಯಾಂಡ್ ಗೆ ಹೋಗಬೇಕಾಗಿದೆ. ಹಾಗಾಗಿ ಇದೆಲ್ಲಕ್ಕಿಂತ ಎಂಟರಿಂದ ಹತ್ತು ದಿನಗಳ ಒಳಗೆ ಸಚಿವ ಸಂಪುಟ ವಿಸ್ತರಣೆ ಮಾಡುವ ಆಲೋಚನೆಯಲ್ಲಿದ್ದೇವೆ ಎಂದು ತಿಳಿಸಿದ್ದಾರೆ.
ಇನ್ನು ವಿದೇಶಕ್ಕೆ ಹೋಗುವುದಕ್ಕೆ ನನಗೆ ಮನಸ್ಸು ಇಲ್ಲ, ಆದರೆ ಅದು ಮುಖ್ಯವಾದ ಪ್ರವಾಸವಾಗಿರುವ ಕಾರಣದಿಂದ ನಾನು ಒತ್ತಾಯದ ಮೇಲೆ ಹೋಗ್ತಿದ್ದೇನೆಂದು ಯಡಿಯೂರಪ್ಪ ಹೇಳಿದ್ದಾರೆ.
ಇನ್ನು ಬಿಜೆಪಿ ಸರ್ಕಾರ ರಚಿಸುವಲ್ಲಿ ಸಹಾಯ ಮಾಡಿದ ಎಲ್ಲಾ ಬಿಜೆಪಿ ನೂತನ ಶಾಸಕರಿಗೆ ಸಿಎಂ ಮಂತ್ರಿ ಸ್ಥಾನದ ಭರವಸೆಯನ್ನು ನೀಡಿದ್ದರು. ಇದರ ಜೊತೆ ಮೂಲ ಬಿಜೆಪಿಗರಲ್ಲಿಯೂ ಸಚಿವ ಸ್ಥಾನದ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದ್ದು, ಯಾರ್ಯಾರಿಗೆ ಮಂತ್ರಿ ಸ್ಥಾನ ಸಿಗಲಿದೆ ಎಂಬ ಕುತೂಹಲ ಮೂಡಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
