CBSE 10th Results : ತುಮಕೂರಿನ ಯಶಸ್ ರಾಜ್ಯಕ್ಕೆ ಟಾಪರ್!!

ಬೆಂಗಳೂರು:

     ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ ಸೋಮವಾರ ಸಿಬಿಎಸ್‌ಇ ಬೋರ್ಡ್‌ 10ನೇ ತರಗತಿ ಫಲಿತಾಂಶವನ್ನು ಪ್ರಕಟಗೊಂಡಿದ್ದು,  ತುಮಕೂರು ಮೂಲದ ಯಶಸ್‌.ಡಿ. ರವರು ರಾಜ್ಯಕ್ಕೆ ಟಾಪರ್‌ ಆಗಿ ಹೊರ ಹೊಮ್ಮಿದ್ದಾರೆ.

       ತುಮಕೂರಿನ ವಿದ್ಯಾ ವಾರಿಧಿ ಇಂಟರ್​ನ್ಯಾಷನಲ್​ ಶಾಲೆಯ ವಿದ್ಯಾರ್ಥಿ ಡಿ.ಯಶಸ್​ 500ಕ್ಕೆ 498 ಅಂಕಗಳನ್ನು ಪಡೆದು ಚೆನ್ನೈ ದಕ್ಷಿಣ ವಲಯ ಹಾಗೂ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.

       ಇನ್ನು ದ್ವಿತೀಯ ಸ್ಥಾನವನ್ನು ಧಾರವಾಡದ ಶ್ರೀ ಮಂಜುನಾಥೇಶ್ವರ ಕೇಂದ್ರೀಯ ಶಾಲೆಯ ಗಿರಿಜಾ ಎಂ.ಹೆಗಡೆ ಪಡೆದಿದ್ದು 497 ಅಂಕಗಳನ್ನು ಗಳಿಸಿದ್ದಾಳೆ. ಅಲ್ಲದೆ, ಬೆಂಗಳೂರಿನ ಪ್ರೆಸಿಡೆನ್ಸಿ ಶಾಲೆಯ ಐಶ್ವರ್ಯಾ ಹರಿಹರನ್​ ಅಯ್ಯರ್​ ಹಾಗೂ ನಳಾದಳ ದಿಶಾ ಚೌಧರಿ, ಉಲ್ಲಾಳದ ವಿದ್ಯಾನಿಕೇತನ್ ಪಬ್ಲಿಕ್​ ಶಾಲೆಯ ಪೃಥ್ವಿ ಪಿ.ಶೆಣೈ, ಬೆಂಗಳೂರು ಜೆಪಿ ನಗರದ ಶ್ರೀ ಚೈತನ್ಯಾ ಟೆಕ್ನೋ ಶಾಲೆಯ ಕೆ.ವಿ.ಪ್ರಣವ್​ ಕೂಡ 500ಕ್ಕೆ 497 ಅಂಕಗಳನ್ನು ಪಡೆದಿದ್ದಾರೆ.

ಇಂದು CBSE 10 ನೇ ತರಗತಿ ಫಲಿತಾಂಶ!!!

      ಸುಮಾರು 18 ಲಕ್ಷ 27 ಸಾವಿರದ 472 ವಿದ್ಯಾರ್ಥಿಗಳು ಸಿಬಿಎಸ್‌ಇ 10ನೇ ತರಗತಿ 2019 ಪರೀಕ್ಷೆಗೆ ಅರ್ಜಿ ಹಾಕಿದ್ದರು. ಫೆಬ್ರವರಿ 21, 2019 ರಂದು ಆರಂಭವಾಗಿದ್ದ ಪರೀಕ್ಷೆ ಮಾರ್ಚ್ 27, 2019ರವರೆಗೆ ನಡೆದಿತ್ತು.

      ವಿದ್ಯಾರ್ಥಿಗಳು ಸಿಬಿಎಸ್ಇ ಅಧಿಕೃತ ವೆಬ್​ಸೈಟ್ cbseresults.nic.in ಮೂಲಕ ಫ‌ಲಿತಾಂಶವನ್ನು ನೋಡಬಹುದಾಗಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

Recent Articles

spot_img

Related Stories

Share via
Copy link
Powered by Social Snap