ಬೆಂಗಳೂರು:
ಡ್ರಗ್ಸ್ ಕೇಸ್ ಪ್ರಕರಣ ಸಂಬಂಧ ಖ್ಯಾತ ನಿರೂಪಕಿ ಅನುಶ್ರೀಗೆ ಸಿಸಿಬಿ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದ್ದಾರೆ.
ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿ ಮಂಗಳೂರಿನಲ್ಲಿ ಸಿಸಿಬಿ ಪೊಲೀಸರು ಡ್ಯಾನ್ಸರ್ ಕಿಶೋರ್ ಶೆಟ್ಟಿ ಆಪ್ತ ತರುಣ್ ಅವರನ್ನು ಬಂಧಿಸಿದ್ದರು. ಇಂತಹ ತರುಣ್ ಅನ್ನು ತೀವ್ರ ವಿಚಾರಣೆ ನಡೆಸಿದ್ದಂತ ಸಿಸಿಬಿ ಪೊಲೀಸರಿಗೆ ನಿರೂಪಕಿ ಅನುಶ್ರೀ ಅವರ ಹೆಸರನ್ನು ಬಾಯ್ಬಿಟ್ಟಿದ್ದ ಎನ್ನಲಾಗಿದೆ.
ತರುಣ್ ನೀಡಿದಂತ ಮಾಹಿತಿಯನ್ನು ಆಧರಿಸಿ, ವಿಚಾರಣೆಗೆ ಹಾಜರಾಗುವಂತೆ ಖ್ಯಾತ ನಿರೂಪಕಿ ಅನುಶ್ರೀಗೂ ಮಂಗಳೂರಿನ ಸಿಸಿಬಿ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ವಾಟ್ಸ್ ಅಪ್ ಮೂಲಕ ನೋಟಿಸ್ ಜಾರಿ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ಮೂಲಕ ಖ್ಯಾತ ನಿರೂಪಕಿ ಅನುಶ್ರೀಗೂ ಸಂಕಷ್ಟ ಎದುರಾದಂತಾಗಿದೆ.
ಈ ಕುರಿತಂತೆ ಪ್ರತಿಕ್ರಿಯಿಸಿರುವ ನಿರೂಪಕಿ ಅನುಶ್ರೀ, ನನಗೆ ಸಿಸಿಬಿಯಿಂದ ಯಾವುದೇ ನೋಟಿಸ್ ಬಂದಿಲ್ಲ. ನೋಟಿಸ್ ಬಂದಿದ್ದರೇ ನಾನೇ ಹೇಳುತ್ತಿದೆ. ಈ ವಿಷಯ ಕೇಳಿ ನನ್ನ ಮನೆಯವರು ತುಂಬಾ ಭಯಪಟ್ಟಿದ್ದಾರೆ’ ನೋಟಿಸ್ ನೀಡಿದ್ರೆ ವಿಚಾರಣೆಗೆ ಹಾಜರಾಗುವುದಾಗಿ ಸ್ಪಷ್ಟ ಪಡಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ