ಬೆಂಗಳೂರು:
ಕರ್ನಾಟಕ ಹೈಕೋರ್ಟ್ ಐವರು ವಕೀಲರನ್ನು ಹೆಚ್ಚುವರಿ ನ್ಯಾಯಾಧೀಶರನ್ನಾಗಿ ನೇಮಕ ಮಾಡಲು ಕೇಂದ್ರ ಸರ್ಕಾರ ಸೂಚಿಸಿದೆ.
ವಕೀಲರಾದ ಎನ್.ಎಸ್.ಸಂಜಯ ಗೌಡ, ಜ್ಯೋತಿ ಮೂಲಿಮನಿ, ಆರ್.ನಟರಾಜ್, ಹೇಮಂತ್ ಚಂದನಗೌಡರ್ ಹಾಗೂ ಪ್ರದೀಪ್ ಸಿಂಗ್ ಯೆರೂರು ಅವರನ್ನು ನೂತನ ನ್ಯಾಯಮೂರ್ತಿಗಳನ್ನಾಗಿ ನೇಮಿಸಿ ಕೇಂದ್ರ ಕಾನೂನು ಸಚಿವಾಲಯ ಗುರುವಾರ ಅಧಿಸೂಚನೆ ಹೊರಡಿಸಿದೆ.
ಅಕ್ಟೋಬರ್ 3ರಂದು ಈ ಐವರು ನ್ಯಾಯಮೂರ್ತಿಗಳು ಸೇರಿದಂತೆ ಒಟ್ಟು 8 ವಕೀಲರ ಹೆಸರನ್ನು ಕೇಂದ್ರ ಸರ್ಕಾರಕ್ಕೆ ಕೊಲಿಜಿಯಂ ಶಿಫಾರಸು ಮಾಡಿತ್ತು. ಆದರೆ ಕೇಂದ್ರ ಐವರನ್ನು ಮಾತ್ರ ನೇಮಕ ಮಾಡಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ