ಬೆಂಗಳೂರು:
19 ವರ್ಷದ ಯುವತಿ ಜೊತೆ 16 ವರ್ಷದ ಬಾಲಕನನ್ನು ಬಲವಂತವಾಗಿ ಬಾಲ್ಯವಿವಾಹ ಮಾಡಿರುವ ಘಟನೆ ಮೈಕೊ ಲೇಔಟ್ ವ್ಯಾಪ್ತಿಯ ಅರೆಕೆರೆಯಲ್ಲಿ ನಡೆದಿದೆ.
ಮದುವೆಯಾಗಿದ್ದ ಯುವತಿಗೆ ತಂದೆ ತಾಯಿ ಇರಲಿಲ್ಲ. ಆಕೆ ಅತ್ತೆ ಮನೆಯಲ್ಲಿ ವಾಸವಾಗಿದ್ದಳು. ಯುವತಿಗೆ ಪೋಷಕರು ಇಲ್ಲದ ಕಾರಣ ಬಾಲಕನೊಂದಿಗೆ ಮದುವೆ ಮಾಡಲಾಗಿತ್ತು. ಬಾಲಕನ ಪೋಷಕರು ಅಸ್ಸೋಂ ಮೂಲದವರಾಗಿದ್ದು ಕಳೆದ 20 ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಾಗಿದ್ದರು.
ಬಲವಂತದ ಮದುವೆ ವಿಷಯ ತಿಳಿದ ಪೊಲೀಸರು, ಮದುವೆಯಾಗಿದ್ದ ಯುವತಿಯನ್ನು ಸಂಬಂಧಿಕರಿಗೆ ಒಪ್ಪಿಸಿದ್ದಾರೆ. ವಿವಾಹ ಮಾಡಿಸಿದ ಬಾಲಕನ ಪೋಷಕರನ್ನು ವಶಕ್ಕೆ ಪಡೆದುಕೊಂಡು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ
ಬಾಲ್ಯವಿವಾಹ ನಡೆದ ವಿಷಯದ ಬಗ್ಗೆ ಎನ್ಜಿಓ ಸದಸ್ಯರು ಕೊಟ್ಟ ಮಾಹಿತಿ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಇದೇ ತಿಂಗಳು 19 ರಂದು ಮನೆಗೆ ಹೋಗಿ ಪರಿಶೀಲನೆ ನಡೆಸಿದ ವೇಳೆ ಈ ಪ್ರಕರಣ ಬೆಳಕಿಗೆ ಬಂದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ