ಚಿರತೆಗೆ ಪ್ರಸವ ವೇದನೆ : ಹೊಟ್ಟೆಯಲ್ಲೆ ಮೃತಪಟ್ಟ ಮರಿಗಳು!!

 ಮಂಗಳೂರು :

      ಪಿಲಿಕುಳ ಮೃಗಾಲಯದಲ್ಲಿರುವ 8 ವರ್ಷ ಪ್ರಾಯದ ಹೆಣ್ಣು ಚಿರತೆ ಚಿಂಟುವಿಗೆ ಪ್ರಸವ ವೇದನೆಯಿಂದ ಸ್ಥಿತಿ ಗಂಭೀರವಾದ ಕಾರಣ ತುರ್ತಾಗಿ ಶಸ್ತ್ರ ಚಿಕಿತ್ಸೆ ನಡೆಸಿ ಗರ್ಭದಲ್ಲಿದ್ದ 2 ಮೃತಪಟ್ಟ ಮರಿಗಳನ್ನು ಹೊರತೆಗೆಯಲಾಯಿತು.

      ಶಸ್ತ್ರ ಚಿಕಿತ್ಸೆಯ ನಂತರ ಚಿರತೆ ಚೇತರಿಸುತ್ತಿದ್ದು, ಮೃಗಾಲಯದ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿಗಳು ಚಿರತೆಯ ಆರೋಗ್ಯದ ಬಗ್ಗೆ ನಿಗಾವಹಿಸಿದ್ದಾರೆ. ಶಸ್ತçಕ್ರಿಯೆಯನ್ನು ಮೃಗಾಲಯದ ವೈದ್ಯಾಧಿಕಾರಿ ಡಾ. ವಿಷ್ಣುದತ್ ಮತ್ತು ಡಾ. ಯಶಸ್ವಿ ನಡೆಸಿರುತ್ತಾರೆ.

      8 ವರ್ಷಗಳ ಹಿಂದೆ ತಾಯಿಯಿಂದ ಪರಿತಕ್ತವಾದ 5 ದಿನಗಳ ಮರಿಯನ್ನು ಮೂಡುಬಿದರೆ ಸಮೀಪದಿದಂದ ರಕ್ಷಿಸಿ ಪಿಲಿಕುಳ ಮೃಗಾಲಯದಲ್ಲಿ ಚಿಂಟು ಎಂದು ಹೆಸರಿಟ್ಟು ಪೋಷಿಸಿ ಬೆಳೆಸಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap