ಚಿತ್ರದುರ್ಗ:
ಕೆಎಸ್‍ಆರ್ಟಿಸಿ ಬಸ್ ಮತ್ತು ಚಿತ್ರದುರ್ಗ ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಚಲಿಸುತ್ತಿದ್ದ ಕಾರು ಮುಖಾಮುಖಿ ಡಿಕ್ಕಿಯಾಗಿದ್ದು, ಕಾರು ನಜ್ಜುಗುಜ್ಜಾಗಿದೆ. ಯಾವುದೇ ಯಾರಿಗೂ ಯಾವದೇ ಪ್ರಾಣಾಪಾಯ ಆಗಿಲ್ಲ ಡಿ ಸಿ ವಿನೋತ್ ಪ್ರಿಯಾ ಸೇಫ್ ಆಗಿದ್ದಾರೆ ಎಂದು ತಿಳಿದುಬಂದಿದೆ.
ಹೊಳಲ್ಕೆರೆ ತಾಲ್ಲೂಕಿನ ಶಿವಗಂಗಾ ಗ್ರಾಮದ ಬಳಿ ಘಟನೆ ನಡೆದಿದೆ. ಜಿಲ್ಲಾಧಿಕಾರಿ ಕಾರಿಗೆ ಅಡ್ಡಲಾಗಿ ಬಂದ ಹಸು ತಪ್ಪಿಸಲು ಹೋಗಿ ಬಸ್‍ಗೆ ಡಿಕ್ಕಿಯಾಗಿದೆ. ಜಿಲ್ಲಾಧಿಕಾರಿ ವಿನೋತ್ ಪ್ರಿಯಾರವರ ಎಡಗೈ ಬೆರಳಿಗೆ ಪುಟ್ಟ ಗಾಯವಾಗಿದ್ದರಿಂದ, ಚಿಕಿತ್ಸೆ ಪಡೆದು ವಿಶ್ರಾಂತಿಗೆ ತೆರಳಿದರೆ ಎನ್ನಲಾಗಿದೆ. ಇನ್ನೂ ಕಾರು ಚಾಲಕ ಮನ್ಸೂರ್ ರವರಿಗೆ ಚಿಕ್ಕಪುಟ್ಟ ಗಾಯಗಳಾಗಿವೆ, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಜಿಲ್ಲಾಧಿಕಾರಿಯವರ ಕಾರಿನ ಮುಂಭಾಗ ಸಂಪೂರ್ಣ ಜಖಂ ಆಗಿದ್ದು, ಚಿತ್ರದುರ್ಗದಿಂದ ಹೊಳಲ್ಕೆರೆ ತಾಲ್ಲೂಕಿಗೆ ವೀಕ್ಷಣೆಗೆ ಹೋಗುವ ಸಂದರ್ಭದಲ್ಲಿ ಹಸು ಅಡ್ಡಾ ಬಂದಿದ್ದರಿಂದ ಈ ಅವಘಡ ಸಂಭವಿಸಿದೆ ಶಿವಮೊಗ್ಗದಿಂದ ಚಿತ್ರದುರ್ಗ ಕಡೆಗೆ ತೆರಳುತ್ತಿದ್ದ ಬಸ್‍ಗೂ ಪರಸ್ಪರ ಡಿಕ್ಕಿಯಾಗಿದೆ. ಡಿಕ್ಕಿ ಹೊಡೆದ ಪರಿಣಾಮ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು,
ಅಪಘಾತವಾದ ನಂತರ ಬೇರೆ ಕಾರಿನಲ್ಲಿ ಮರಳಿದ ಚಿತ್ರದುರ್ಗ ಜಿಲ್ಲಾಧಿಕಾರಿ ವಿನೋತ್ ಪ್ರಿಯಾ, ಪ್ರಕರಣ ಚಿತ್ರಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಎಸ್ಪಿ ಜಿ ರಾಧಿಕಾ, ಹಾಗೂ ಎ ಎಸ್ಪಿ ಮಹಾಲಿಂಗ ನಂದಗಾವಿ ಘಟನ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ