ಮಾಧುಸ್ವಾಮಿ ಪರವಾಗಿ ಕುರುಬ ಸಮುದಾಯದ ಕ್ಷಮೆ ಕೇಳಿದ ಸಿಎಂ!!

ಬೆಂಗಳೂರು:

       ಸಚಿವ ಮಾಧುಸ್ವಾಮಿ ಅವರ ಪರವಾಗಿ ಸಿಎಂ ಬಿ.ಎ‌ಸ್‌.ಯಡಿಯೂರಪ್ಪನವರು ಕುರುಬ ಸಮುದಾಯದ ಕ್ಷಮೆ ಕೋರಿದ್ದಾರೆ.

      ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಕಾಗಿನೆಲೆ ಕನಕ ಗುರುಪೀಠ ಹೊಸದುರ್ಗ ಶಾಖಾ ಮಠದ ಈಶ್ವರಾನಂದಪುರಿ ಸ್ವಾಮೀಜಿ ಅವರಿಗೆ ಅಗೌರವ ತೋರಿದ್ದಾರೆ. ಸಚಿವರು ಸ್ವಾಮೀಜಿ ಅವರ ಬಳಿ ಕ್ಷಮೆ ಕೇಳಬೇಕು ಎಂದು ಸಮಾಜ ಆಗ್ರಹ ವ್ಯಕ್ತಪಡಿಸಿತ್ತು.

       ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹುಳಿಯಾರು ವೃತ್ತದಲ್ಲಿದ್ದ ಕನಕದಾಸರ ನಾಮಫಲಕ ತೆರವುಗೊಳಿಸುವ ವಿಚಾರಕ್ಕೆ ಲಿಂಗಾಯತ ಹಾಗೂ ಕುರುಬ ಸಮುದಾಯದ ನಡುವೆ ಗಲಾಟೆಯಾಗಿತ್ತು. ಈ ವಿಚಾರವಾಗಿ ಇತ್ತೀಚೆಗೆ ನಡೆದ ಸಂಧಾನ ಸಭೆಯಲ್ಲಿ ಶ್ರೀಗಳಿಗೆ ಅವಮಾನ ಮಾಡಿದ್ದಾರೆ. ಮಾಧುಸ್ವಾಮಿ ಕುರುಬ ಸಮುದಾಯದ ಕ್ಷಮೆ ಕೋರಬೇಕು. ಹುಳಿಯಾರು ವೃತ್ತದಲ್ಲಿ ಮತ್ತೆ ಕನಕದಾಸರ ನಾಮಫಲಕ ಮರುಸ್ಥಾಪಿಸಬೇಕು ಎಂದು ಒತ್ತಾಯಿಸಿದ್ದರು.

      ಆದರೆ ಸಚಿವ ಮಾಧುಸ್ವಾಮಿ, ನಾನು ಯಾವುದೇ ಸ್ವಾಮೀಜಿ ವಿರುದ್ಧ ಮಾತನಾಡಿಲ್ಲ. ಚರ್ಚೆ ಕೊನೆಯಲ್ಲಿ ಒರಟಾಗಿ ಮಾತಾಡಿದ್ದೇನೆ ಅಷ್ಟೇ.  ಕನಕ ಸರ್ಕಲ್ ಅಂತ ಹೆಸರು ಇಡೋದರಲ್ಲಿ ನನ್ನ ತಕರಾರಿಲ್ಲ. ಕುರುಬ ಸಮುದಾಯದ ಕ್ಷಮೆ ಕೋರುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದ್ದರು.

      ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮತನಾತನಾಡಿದ ಸಿಎಂ, ಮಾಧುಸ್ವಾಮಿ ಸೇರಿದಂತೆ ನಮಗೆಲ್ಲರಿಗೂ ಕನಕದಾಸರ ಕುರಿತು ಆಪಾರ ಗೌರವವಿದೆ. ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಪಟ್ಟಣದ ಪೆಟ್ರೋಲ್‌ ಬಂಕ್‌ ವೃತ್ತದಲ್ಲಿ ಕನಕದಾಸರ ನಾಮಫಲಕ ಅಳವಡಿಕೆ ಸಂಬಂಧ ಎರಡು ಗುಂಪುಗಳ ನಡುವೆ ಸದ್ಯ ವಿವಾದ ಉದ್ಭವಿಸಿತ್ತು ಇದು ವಿವಾದಕ್ಕೆ ಕಾರಣವಾಗಿತ್ತು. ತಪ್ಪು ಗ್ರಹಿಕೆಯಿಂದ ಈ ಘಟನೆ ನಡೆದಿದ್ದು, ಯಾರೂ ಕೂಡಾ ಮುಂದುವರೆಸಿಕೊಂಡು ಹೋಗಬಾರದೆಂದು ಪ್ರಾರ್ಥಿಸುತ್ತೇನೆ. ಆ ವೃತ್ತಕ್ಕೆ ಕನಕ ವೃತ್ತ ಎಂದು ಹೆಸರು ಇಡುವುದಕ್ಕೆ ಯಾರಿಂದಲೂ ಆಕ್ಷೇಪವಿಲ್ಲ ಎಂದು ತಿಳಿಸಿ ಸಿಎಂ ಬಿಎಸ್​ ಯಡಿಯೂರಪ್ಪ ಕ್ಷಮೆ ಯಾಚಿಸಿದ್ದಾರೆ. ಈ ಮೂಲಕ ಉಪಚುನಾವಣೆ ಸಂದರ್ಭದಲ್ಲಿ ಬಿಎಸ್​ವೈ ಜಾಗರೂಕ ನಡೆ ಅನುಸರಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap