ಬೆಂಗಳೂರು:
ಪಾಕಿಸ್ತಾನೀಯರಂತೆ ಬಿಜೆಪಿಯವರೂ ಕೂಡ ಹೇಳಿಕೆ ತಿರುಚುವುದರಲ್ಲಿ, ವಿಡಿಯೋ ಎಡಿಟ್ ಮಾಡುವುದರಲ್ಲಿ ನಿಸ್ಸೀಮರು ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಬಿಜೆಪಿಯನ್ನು ಟೀಕಿಸಿದ್ದಾರೆ.
ಬಿಜೆಪಿ ನಾಯಕ ಜಗದೀಶ್ ಶೆಟ್ಟರ್ ಅವರು ಕುಮಾರಸ್ವಾಮಿ ಮಾತನಾಡುತ್ತಿರುವ ವಿಡಿಯೋವೊಂದನ್ನು ಪೋಸ್ಟ್ ಮಾಡಿ ಸಿಎಂ ವಿರುದ್ಧ ಟೀಕೆ ಮಾಡಿದ್ದರು. “ಉಗ್ರಗಾಮಿಗಳು ಮತ್ತು ದೇಶಪ್ರೇಮಿಗಳ ನಡುವಿನ ವ್ಯತ್ಯಾಸ ತಿಳಿದುಕೊಳ್ಳಿ. ಉಗ್ರಗಾಮಿಗಳು ಸತ್ತರ ದೇಶದೊಳಗಡೆ ಶಾಂತಿ ಯಾಕೆ ಕದಡುತ್ತೆ? ನಿಮ್ಮ ಪ್ರಕಾರ ದೇಶದೊಳಗೆ ಉಗ್ರಗಾಮಿಗಳು ಇದ್ದಾರೆ ಅಂತಾಯ್ತು. ನಿಮಗೆ ಗೊತ್ತಿರೊ ಉಗ್ರಗಾಮಿಗಳನ್ನು ದಯವಿಟ್ಟು ಸೈನಿಕರಿಗೆ ಹಿಡಿದುಕೊಟ್ಟು ಪುಣ್ಣ ಕಟ್ಟಿಕೊಳ್ಳಿ” ಎಂದು ಜಗದೀಶ್ ಶೆಟ್ಟರ್ ಟ್ವೀಟ್ ಮಾಡಿದ್ದರು.
ಮಾನ್ಯ @hd_kumaraswamy
ಉಗ್ರಗಾಮಿಗಳು & ದೇಶಪ್ರೇಮಿಗಳ ನಡುವಿನ ವ್ಯತ್ಯಾಸ ತಿಳಿದುಕೊಳ್ಳಿ!
ಉಗ್ರಗಾಮಿಗಳು ಸತ್ತರೆ ದೇಶದೊಳಗಡೆ ಶಾಂತಿ ಯಾಕೆ ಕದಡುತ್ತೆ?
ನಿಮ್ಮ ಪ್ರಕಾರ ದೇಶದೊಳಗೆ ಉಗ್ರಗಾಮಿಗಳು ಇದ್ದಾರೆ ಅಂತಾಯ್ತು!
ನಿಮಗೆ ಗೊತ್ತಿರೊ ಉಗ್ರಗಾಮಿಗಳನ್ನು ದಯವಿಟ್ಟು ಸೈನಿಕರಿಗೆ ಹಿಡಿದು ಕೊಟ್ಟು ಪುಣ್ಯ ಕಟ್ಟಿಕೊಳ್ಳಿ! #GaddarList pic.twitter.com/kgxac5UN3P
— Jagadish Shettar (@JagadishShettar) March 2, 2019
ಜಗದೀಶ್ ಶೆಟ್ಟರ್ ಅವರ ಟ್ವೀಟ್ ಗೆ ಕೆಂಡಾಮಂಡಲರಾಗಿರುವ ಸಿಎಂ, ನಮ್ಮ ರಕ್ಷಣಾ ಕಾರ್ಯಾಚರಣೆಯ ವಿಚಾರವನ್ನು ಬಳಸಿಕೊಂಡು ನಮ್ಮ ಬಿಜೆಪಿ ಸ್ನೇಹಿತರು ರಾಜಕೀಯ ಲಾಭ ಗಳಿಸುವ ಹಾಗೂ ಯುದ್ಧೋನ್ಮಾದ ಮಾತುಗಳಿಂದ ಸಾಮಾಜಿಕ ಅಶಾಂತಿ ಮೂಡಿಸುತ್ತಿರುವ ಪ್ರಯತ್ನದ ಬಗ್ಗೆ ತಾನು ಮಾತನಾಡಿದ್ದು. ಆದರೆ ಆ ಹೇಳಿಕೆಯನ್ನೇ ತಿರುಚಿದ್ದೀರಿ. ನಮ್ಮ ನೆರೆಯ ರಾಷ್ಟ್ರದಂತೆಯೇ ನೀವೂ ಕೂಡ ನಕಲಿ ಸುದ್ದಿಗಳ ತಜ್ಞರೆಂದು ಸಾಬೀತುಪಡಿಸಿದ್ದೀರಿ ಎಂದು ಕುಟುಕಿ ಟ್ವೀಟ್ ಮಾಡಿದ್ದಾರೆ.
It is dangerous to edit words outof context to malign someone to suit your political gains.Your action is the same as Pakistan's,of creating a doctored propaganda video outof our hero #Abhinandan's statement. My comment was on our BJP friends' attempts to gain political mileage..
— H D Kumaraswamy (@hd_kumaraswamy) March 2, 2019
ಪಾಕಿಸ್ತಾನ ವಿರುದ್ಧ ಭಾರತದ ಸೇನಾ ಕಾರ್ಯಾಚರಣೆಯನ್ನು ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆಂಬ ಅರ್ಥದಲ್ಲಿ ಟೀಕೆ ಮಾಡಿದ್ದ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿರುವ ಹೆಚ್ಡಿಕೆ, “ಬಿಜೆಪಿ ನಾಯಕರು ತಾವೇ ಹೋಗಿ ದಾಳಿ ನಡೆಸಿದ್ದೇವೆಂದು ಸಂಭ್ರಮಿಸುತ್ತಿದ್ದಾರೆ” ಎಂಬರ್ಥದಲ್ಲಿ ತಾನು ಹೇಳಿದ್ದು. ಆದರೆ, ಬಿಜೆಪಿಯವರು ತಮ್ಮ ಹೇಳಿಕೆಯನ್ನು ತಿರುಚಿ ಬೇರೆ ಅರ್ಥ ಬರುವ ರೀತಿಯಲ್ಲಿ ವಿಡಿಯೋ ಎಡಿಟ್ ಮಾಡಿದ್ದಾರೆ ಎಂದು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನಿಮ್ಮ ರಾಜಕೀಯ ಲಾಭಕ್ಕಾಗಿ ಒಬ್ಬರ ಹೆಸರಿಗೆ ಮಸಿ ಬಳಿಯುವ ರೀತಿಯಲ್ಲಿ ಹೇಳಿಕೆ ತಿರುಚುವುದು ಸರಿಯಲ್ಲ. ನಮ್ಮ ಹೀರೋ ಅಭಿನಂದನ್ ಅವರ ಹೇಳಿಕೆಯನ್ನು ತಿರುಚಿ ಪಾಕಿಸ್ತಾನೀಯರು ವಿಡಿಯೋ ಸೃಷ್ಟಿಸಿದಂತೆಯೇ ನೀವೂ ಮಾಡಿದ್ದೀರಿ ಎಂದು ಕುಮಾರಸ್ವಾಮಿ ಅವರು ಬಿಜೆಪಿಯವರನ್ನು ಪಾಕಿಸ್ತಾನೀಯರಿಗೆ ಹೋಲಿಕೆ ಮಾಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ