ಹೆಲಿಕಾಫ್ಟರ್ ನಲ್ಲಿ ತುಮಕೂರಿಗೆ ಹೊರಟ ಸಿಎಂ!!

ತುಮಕೂರು: 

     ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಏರುಪೇರಾಗಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಹೆಲಿಕಾಪ್ಟರ್ ನಲ್ಲಿ ತುರ್ತಾಗಿ ತುಮಕೂರಿನತ್ತ ತೆರಳಿದ್ದಾರೆ.

      ಸದ್ಯ ಮೈಸೂರಿನಲ್ಲಿರುವ ಸಿಎಂ ಕುಮಾರಸ್ವಾಮಿ ಇಂದು ಪೂರ್ವ ನಿಗದಿತ ಕಾರ್ಯಕ್ರಮದಂತೆ ಹಾವೇರಿಗೆ ಹೆಲಿಕಾಪ್ಟರ್‍ ಮೂಲಕ ತೆರಳಬೇಕಿತ್ತು.ಆದರೆ  ಶ್ರೀಗಳ ಆರೋಗ್ಯ ಸ್ಥಿತಿ ಏರುಪೇರಾಗಿರುವ ಹಿನ್ನೆಲೆ ಪ್ರವಾಸ ಮೊಟಕುಗೊಳಿಸಿ, ಸಿದ್ಧಗಂಗಾ ಮಠಕ್ಕೆ ತೆರಳಲು ನಿರ್ಧರಿಸಿದ್ದಾರೆ. ಬೆಳಗ್ಗೆ 11ಕ್ಕೆ ಹೊರಟು ಮಠ ತಲುಪಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

      ಇತ್ತ ತುಮಕೂರು ಮಾರ್ಗವಾಗಿ ಬೆಂಗಳೂರಿಗೆ ಬರುವ ವಾಹನಗಳ ರಸ್ತೆಯನ್ನ ಬದಲಾವಣೆ ಮಾಡಲಾಗಿದ್ದು, ಚಿತ್ರದುರ್ಗ, ದಾವಣಗೆರೆಯಿಂದ ಶಿರಾ ಮೂಲಕ ಬರುವ ವಾಹನಗಳ ಮಾರ್ಗ ಬದಲಾವಣೆ ಮಾಡಿದೆ. ಕೇಂದ್ರ ವಲಯದ ಎಲ್ಲಾ ಪೊಲೀಸ್ ಸಿಬ್ಬಂದಿ ಆಯಾ ಠಾಣೆಗೆ ಬರುವಂತೆ ಸೂಚನೆ ನೀಡಲಾಗಿದೆ. ನಂತರದಲ್ಲಿ ಬೆಳವಣಿಗೆ ಸಾಧ್ಯತೆ ಇದೆ. \

      ಸದ್ಯಕ್ಕೆ ಕೇಂದ್ರ ವಲಯ ಐಜಿ ದಯಾನಂದ ಅವರಿಂದ ಮಠದ ಆವರಣದ ಪರಿಶೀಲನೆ ನಡೆಯುತ್ತಿದೆ. ಮುಂಜಾಗೃತ ಕ್ರಮವಾಗಿ ರಾಜ್ಯಾದ್ಯಂತ ಪೊಲೀಸ್ ಹೈ ಅಲರ್ಟ್ ಮಾಡಲಾಗಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link