ಬಾಗಲಕೋಟೆ:
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಬೆಂಗಾವಲು (ಎಸ್ಕಾರ್ಟ್) ನೀಡಿ ಜಿಲ್ಲೆಗೆ ಕರೆತರಲು ಹೊರಟಿದ್ದ ಪೊಲೀಸ್ ಜೀಪ್ ಬೆಳಗಾವಿ ಜಿಲ್ಲೆ ರಾಯಭಾಗ ಕಪ್ಪಲಗುದ್ದಿ ಕ್ರಾಸ್ ಬಳಿ ಪಲ್ಟಿಯಾಗಿದೆ.
ಅಪಘಾತದಲ್ಲಿ ಇಳಕಲ್ ಗ್ರಾಮಾಂತರ ಠಾಣೆ ಪಿಎಸ್ ಐ ಮಂಜುನಾಥ ರಾಥೋಡ, ಶಹರ ಠಾಣೆ ಪಿಎಸ್ಹೈ ಶ್ರೀಕುಮಾರ ಹಾಡಕರ್ ಚಾಲಕ ಶಿವಾನಂದ ಕಟ್ಟಿಮನಿ ಗಾಯಗೊಂಡಿದ್ದಾರೆ.
ಸಿಎಂ ಯಡಿಯೂರಪ್ಪ ಕಾರ್ಯಕ್ರಮಕ್ಕೆ ಬಂದೂಬಸ್ತ್ ಗಾಗಿ ತೆರಳುತ್ತಿದ್ದ ಪೋಲಿಸ್ ವಾಹನ ಬಾಗಲಕೋಟೆ ಜಿಲ್ಲೆಯ ಸೈದಾಪುರದ ಕಪ್ ಬಳಿ ಸಿಎಂ ಬರುವ ಮುನ್ನ ತಾಲೀಮು ನಡೆಸಲು ಮುಂದಾಗಿದ್ದು, ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಹೊಲಕ್ಕೆ ನುಗ್ಗಿ ಅಲ್ಲಿ ಉರುಳಿ ಬಿದ್ದು ಅಪಘಾತ ಸಂಭವಿಸಿದೆ. ನಂತರ ಬೇರೊಂದು ವಾಹನ ಕಳುಹಿಸಿಕೊಡಲಾಯಿತು ಎನ್ನಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
