ಸಿದ್ದರಾಮಯ್ಯರವರ ‘ಶಾದಿ ಭಾಗ್ಯ’ ಕೈ ಬಿಟ್ಟ ದೋಸ್ತಿ ಸರ್ಕಾರ!?

ಬೆಳಗಾವಿ:

     ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದದಲ್ಲಿ ಜಾರಿಗೆ ತಂದಿದ್ದ ಶಾದಿ ಭಾಗ್ಯ ಯೋಜನೆಯನ್ನು ದೋಸ್ತಿ ಸರಕಾರ ಕೈಬಿಟ್ಟಿದೆಯಾ ಎನ್ನುವ ಪ್ರಶ್ನೆಯೊಂದು ಉದ್ಭವವಾಗಿದೆ.

      ಈ ಬಗ್ಗೆ ಬೆಳಗಾವಿಯಲ್ಲಿ ಆರ್.ಟಿ.ಐ ಕಾರ್ಯಕರ್ತ ಭೀಮಪ್ಪ ಗಡಾದ ಅವರು ಮಾಧ್ಯಮದವರೊಂದಿಗೆ ದಾಖಲೆಗಳನ್ನು ಬಿಡುಗಡೆ ಮಾಡಿ, ಸಮ್ಮಿಶ್ರ ಸರ್ಕಾರದ ಮಲತಾಯಿ ಧೋರಣೆ ಮಾಹಿತಿ ಹಕ್ಕಿನಲ್ಲಿ ಈ ವಿಷಯವನ್ನು ಬಹಿರಂಗವಾಗಿ ಮಾತನಾಡಿದ್ದಾರೆ.

      ಶಾದಿ ಭಾಗ್ಯ ಯೋಜನೆ ಅಡಿಯಲ್ಲಿ ಮದುವೆಯಾದ ಸುಮಾರು 28,540 ಅರ್ಹ ಫಲಾನುಭವಿಗಳಿಗೆ ಇನ್ನೂ ಧನ ಸಹಾಯ ಸಿಕ್ಕಿಲ್ಲ. ಸರ್ಕಾರ ಧನ ಸಹಾಯ ಮಾಡುತ್ತದೆ ಎಂದು ಸಾಲಸೋಲ ಮಾಡಿ ಮದುವೆ ಮಾಡಿಕೊಂಡ ಬಡ ಕುಟುಂಬಗಳು ಈಗ ಹಿಡಿಶಾಪ ಹಾಕುತ್ತಿವೆ. ಯೋಜನೆಯ 142 ಕೋಟಿ ರೂ. ಹಣವನ್ನು ಸಮ್ಮಿಶ್ರ ಸರ್ಕಾರ ಬಾಕಿ ಉಳಿಸಿಕೊಂಡಿದೆ ಎಂದು ಹೇಳಿದ್ದಾರೆ

      ಈ ಯೋಜನೆಗೆ ಅತಿ ಹೆಚ್ಚು ಅರ್ಜಿಗಳು ಧಾರವಾಡ ಹಾಗೂ ಹಾವೇರಿ ಜಿಲ್ಲೆಯಿಂದ ಬಂದಿದೆ. ಧಾರವಾಡದಲ್ಲಿ ಸುಮಾರು 2,440 ಅರ್ಜಿಗಳು ಹಾಗೂ ಹಾವೇರಿಯಲ್ಲಿ 2,342 ಅರ್ಜಿಗಳಿಗೆ ಹಣ ನೀಡುವುದು ಬಾಕಿ ಉಳಿದಿವೆ. ಚಾಮರಾಜನಗರ ಅತಿ ಕಡಿಮೆ ಅರ್ಜಿ ಎಂದರೆ 249 ಅರ್ಜಿ ಬಾಕಿ ಉಳಿದಿದೆ. ಆರ್ಥಿಕ ಸಂಕಷ್ಟ ಎದುರಿಸುತ್ತಾ ಸರ್ಕಾರದ ಹಣ ನಂಬಿ ಮದುವೆಯಾದ ಬಡ ಕುಟುಂಬಗಳಿಗೆ ಇಲ್ಲಿಯವರೆಗೂ ರಾಜ್ಯ ಸರ್ಕಾರ ಹಣ ಬಿಡುಗಡೆ ಮಾಡಿಲ್ಲ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

Recent Articles

spot_img

Related Stories

Share via
Copy link
Powered by Social Snap