ಮೈಸೂರು:
ಕರ್ನಾಟಕದಲ್ಲಿ ಕಳೆದ 8 ತಿಂಗಳಿಂದ ಅಧಿಕಾರ ನಡೆಸುತ್ತಿರುವ ‘CoJa’ ಸರ್ಕಾರ ರೈತರ ಆತ್ಮಹತ್ಯೆ ತಡೆಯಲು ಸಂಪೂರ್ಣ ವಿಫಲವಾಗಿದೆ ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆ ಮಾರ್ಮಿಕವಾಗಿ ಟ್ವೀಟ್ ಮಾಡುವ ಮೂಲಕ ಹೊಸ ವಿವಾದ ಸೃಷ್ಠಿಸಿದ್ದಾರೆ.
ಬಜೆಟ್ ನಲ್ಲಿ ರೈತರಿಗೆ ಘೋಷಣೆ ಮಾಡಿದ ವಿಶೇಷ ಯೋಜನೆಗಳ ಅನುಷ್ಠಾನಕ್ಕೆ ಯಾವುದೇ ಅಡ್ಡಿಆತಂಕಗಳಿಲ್ಲದೆ ಕೂಡಲೇ ಜಾರಿಗೆ ಅನುವಾಗುವಂತೆ ಕೇಂದ್ರ ಸರ್ಕಾರ ಸೂಚಿಸಿರುವುದು ಸಂತಸದ ಸುದ್ಧಿ. ಸಾಲ-ಮನ್ನಾ ಮಾಡುತ್ತೇವೆ ಎಂದು ಹೇಳಿ ಅಧಿಕಾರ ಕಬಳಿಸಿದ #CoJa ಸರ್ಕಾರಕ್ಕೆ ೮ ತಿಂಗಳಾದರೂ ರೈತರ ಆತ್ಮಹತ್ಯೆ ತಡೆಯಲಾಗುತ್ತಿಲ್ಲ.https://t.co/Ej3O11niTD
— Anantkumar Hegde (@AnantkumarH) February 6, 2019
ಇತ್ತೀಚೆಗೆ ವಿವಾದಾತ್ಮಕ ಹೇಳಿಕೆಗಳ ಸರದಾರನಾಗಿರುವ ಹೆಗಡೆಯವರು ಇದೀಗ ಕೇಂದ್ರ ಸರ್ಕಾರ ಬಜೆಟ್ ಅನ್ನು ಕೇಂದ್ರ ಬಿಂದುವಾಗಿರಿಸಿ ಕೇಂದ್ರದ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ರಾಜ್ಯ ಸರ್ಕಾರದ ವೈಫಲ್ಯ ತೋರಿಸು ರೀತಿಯಲ್ಲಿ ಟ್ವೀಟ್ ಮಾಡಿದ್ದಾರೆ.
ಕೇಂದ್ರ ಸರ್ಕಾರದ ಬಜೆಟ್ ನಲ್ಲಿ ರೈತರಿಗೆ ಘೋಷಣೆ ಮಾಡಿದ ವಿಶೇಷ ಯೋಜನೆಗಳ ಅನುಷ್ಠಾನಕ್ಕೆ ಯಾವುದೇ ಅಡ್ಡಿ ಆತಂಕಗಳಿಲ್ಲದೆ ಕೂಡಲೇ ಜಾರಿಯಾಗುವಂತೆ ಸೂಚಿಸಿರುವುದು ಸಂತಸದ ಸುದ್ದಿ. ಆದರೆ ಸಾಲ ಮನ್ನಾ ಮಾಡುತ್ತೇವೆ ಎಂದು ಹೇಳಿ ಅಧಿಕಾರ ಕಬಳಿಸಿದ #CoJa ಸರ್ಕಾರ 8 ತಿಂಗಳಾದರೂ ರೈತರ ಆತ್ಮಹತ್ಯೆ ತಡೆಯಲಾಗುತ್ತಿಲ್ಲ ಎಂದು ಟ್ವೀಟರ್ ನಲ್ಲಿ ಟೀಕಿಸಿ ಟ್ವೀಟ್ ಮಾಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








