ಮಂಗಳೂರು:
ಕೆನಡಾದಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್ ಅಂತಾರಾಷ್ಟ್ರೀಯ ಬೆಂಚ್ ಪ್ರೆಸ್ ಪವರ್ ಲಿಫ್ಟ್ ಚಾಂಪಿಯನ್ ಶಿಪ್ 83 ಕಿಲೋ ಸಬ್ ಜೂನಿಯರ್ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸಿರುವ ಋತ್ವಿಕ್ ಅಲೆವೂರಾಯ ಕೆ.ವಿ.ಅವರು ಇಂದು ಎರಡು ಚಿನ್ನದ ಪದಕ ಪಡೆದಿದ್ದಾರೆ.
ಋತ್ವಿಕ್, ಕ್ಲಾಸಿಕ್ ಮತ್ತು ಎಕ್ವಿಪ್ಡ್ ಎಂಬ 2 ವಿಭಾಗದಲ್ಲಿ ಭಾರ ಎತ್ತಿ ಚಿನ್ನದ ಪಡೆದಿದ್ದಾರೆ. ಇವರು ಪ್ರದೀಪ್ ಆಚಾರ್ಯ ಅವರಿಂದ ತರಬೇತಿ ಪಡೆಯುತ್ತಿದ್ದು, ಸಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜ್ ವಿದ್ಯಾರ್ಥಿಯಾಗಿದ್ದಾರೆ.
ಶಾರದಾ ವಿದ್ಯಾನಿಕೇತನ ಶಾಲೆಯ ಹಳೆ ವಿದ್ಯಾರ್ಥಿಯಾಗಿದ್ದ ಋತ್ವಿಕ್ ಅವರು ವಾಸುದೇವ ಭಟ್ ಕುಂಜತ್ತೋಡಿ ಮತ್ತು ದೀಪಾ ದಂಪತಿ ಪುತ್ರ.
ಋತ್ವಿಕ್ ಅವರ ತರಬೇತುದಾರ ಮಂಗಳೂರಿನ ಉರ್ವಾಸ್ಟೋರ್ ನವರಾದ ಪ್ರದೀಪ್ ಕುಮಾರ್ ಆಚಾರ್ಯ ಅವರು ಕೂಡ ಇದೇ ಕೂಟದಲ್ಲಿ ಮಂಗಳವಾರ ನಡೆದ 83 ಕೆ.ಜಿ.ವಿಭಾಗದ ಹಿರಿಯರ ವಿಭಾಗದಲ್ಲಿ ಚಿನ್ನ ಗೆದ್ದಿದ್ದರು. ಒಂದೇ ಕ್ರೀಡಾಕೂಟದಲ್ಲಿ ಗುರು ಶಿಷ್ಯರು ಚಿನ್ನದ ಪದಕ ಗೆದ್ದ ಅಪೂರ್ವ ಸಾಧನೆ ಇದಾಗಿದೆ. ಇಬ್ಬರೂ ಕೂಡ ಮಂಗಳೂರಿನವರು ಅನ್ನುವುದು ಮತ್ತೊಂದು ವಿಶೇಷ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
