ಬಳ್ಳಾರಿ:
ಹಂಪಿಗೆ ಭೇಟಿ ನೀಡಿದ್ದ ಬಿಜೆಪಿ ಕೇಂದ್ರ ಸಚಿವ ಪಿಯೂಶ್ ಗೋಯಲ್ ಅವರನ್ನು ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ಭೇಟಿ ಮಾಡಿದ್ದು, ಹಲವು ಕುತೂಹಲಗಳಿಗೆ ಎಡೆಮಾಡಿ ಕೊಟ್ಟಿದೆ.
ನಿನ್ನೆ [ಸೋಮವಾರ] ವಿರೂಪಾಕ್ಷ ದೇವರ ದರ್ಶನ ಪಡೆಯುವವರೆಗೂ ಜತೆಯಲ್ಲೇ ಆನಂದ್ ಸಿಂಗ್, ಕಮಲಾಪುರದ ರಜಪೂತ ಕೋಟೆಗೆ ಕೂಡ ಕರೆದುಕೊಂಡು ಹೋಗಿ ಸತ್ಕರಿಸಿ, ಕೆಲ ಹೊತ್ತು ಮಾತುಕತೆ ನಡೆಸಿದ್ದಾರೆ.
ಆನಂದ್ ಸಿಂಗ್ ಮೊದಲು ಬಿಜೆಪಿಯಲ್ಲೇ ಇದ್ದವರು. 2018ರ ವಿಧಾನಸಭೆ ಚುನಾವಣೆ ಚುನಾವಣೆ ವೇಳೆ ಕಾಂಗ್ರೆಸ್ಗೆ ಸೇರಿದ್ದರು. ಬಳಿಕ ರಾಜ್ಯ ಮೈತ್ರಿ ಸರ್ಕಾರದಲ್ಲಿ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದರು. ಆದರೆ ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸ್ಥಾನದಿಂದ ವಂಚಿತರಾಗಿದ್ದರು. ಅದಾದ ಬಳಿಕ ನನಗೆ ಸಚಿವನಾಗುವ ಬಯಕೆ ಇಲ್ಲವೆಂದೂ ಹೇಳಿದ್ದರು.
ಆದರೆ ಈಗ ಪಿಯೂಶ್ ಗೋಯಲ್ ಭೇಟಿ ಮಾಡಿದ್ದಲ್ಲದೆ ಕೆಲ ಹೊತ್ತು ಮಾತುಕತೆ ನಡೆಸಿದ್ದಾರೆ. ಕಾಂಗ್ರೆಸ್ ಕಾರ್ಯ ಚಟುವಟಿಕೆಗಳಿಂದ ದೂರ ಉಳಿದು ಸೈಲೆಂಟ್ ಆಗಿದ್ದಾರೆ.
ಇತ್ತ ಸಚಿವ ಸ್ಥಾನ ಸಿಗದ ಶಾಸಕರೊಬ್ಬರು ಕೇಂದ್ರ ಸಚಿವ ಪಿಯೂಶ್ ಗೋಯೆಲ್ ಜೊತೆ ಕಾಣಿಸಿಕೊಳ್ಳುವ ಮೂಲಕ ಕೈ ಅಂಗಳದಲ್ಲಿ ಭಾರೀ ಚರ್ಚೆಗೆ ಒಳಗಾಗಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
