ಧಾರವಾಡ:
ಮಹಾಭಾರತ ರಚಿಸಿರೋ ವೇದವ್ಯಾಸರೊಬ್ಬರೇ ನಮ್ಮ ದೇಶದ ರಾಷ್ಟ್ರಪಿತ ಎಂದು ಹೇಳುವ ಮೂಲಕ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದಾರೆ.
ಅವರು ಭಾನುವಾರ ಧಾರವಾಡದಲ್ಲಿ ಮಾತನಾಡಿ, ಮಹಾಭಾರತ ರಚಿಸಿರೋ ವೇದವ್ಯಾಸರೊಬ್ಬರೇ ನಮ್ಮ ದೇಶದ ರಾಷ್ಟ್ರಪಿತ. ಉಳಿದವರು ಅನೇಕರು ದೊಡ್ಡ ವ್ಯಕ್ತಿಗಳಿದ್ದರೂ ಅವರೆಲ್ಲ ರಾಷ್ಟ್ರಪುತ್ರರು ಮಾತ್ರ. ಎಂದು ಹೇಳುವ ಮೂಲಕ ಪರೋಕ್ಷವಾಗಿ ಮಹಾತ್ಮಾ ಗಾಂಧಿ ರಾಷ್ಟ್ರಪಿತ ಅಲ್ಲ ಎಂದು ವಿವಾದದ ಕಿಡಿ ಹೊತ್ತಿಸಿದ್ದಾರೆ.
ಮಹಾಭಾರತದಲ್ಲಿ ಎಲ್ಲವೂ ಅಡಗಿದೆ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ತತ್ವಶಾಸ್ತ್ರ, ವೇದಾಂತ ಹೀಗೆ ಎಲ್ಲವನ್ನು ವೇದವ್ಯಾಸರು ಮಹಾಭಾರತದ ಮೂಲಕ ಹೇಳಿಕೊಟ್ಟಿದ್ದಾರೆ. ರಾಜಕಾರಣ ಹೇಗಿರಬೇಕು, ರಾಜನಾದವರು ದೇಶ ಪರಿಪಾಲನೆ ಹೇಗೆ ಮಾಡಬೇಕು ಎಂಬುದೆಲ್ಲವನ್ನು ವೇದವ್ಯಾಸರು ಮಹಭಾರತದ ಮೂಲಕ ಪರಿಚಯ ಮಾಡಿಕೊಟ್ಟಿದ್ದಾರೆ. ಹೀಗಾಗಿ ವೇದವ್ಯಾಸರೊಬ್ಬರೇ ನಮ್ಮ ದೇಶದ ರಾಷ್ಟ್ರಪಿತ ಎಂದು ಹೇಳಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
