ಬಳ್ಳಾರಿ:
61 ವರ್ಷದ ಕೊರೊನಾ ಸೋಂಕಿತ ವ್ಯಕ್ತಿ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ಎಸ್ ನಕುಲ್ ಮಾಹಿತಿ ನೀಡಿದ್ದಾರೆ.
ಈ ಮೊದಲೇ ಆ ವ್ಯಕ್ತಿ ರಕ್ತದೊತ್ತಡ ಹಾಗೂ ಮಧುಮೇಹ ಸಮಸ್ಯೆಯಿಂದ ಬಳಲುತ್ತಿದ್ದ ಇವರು ಬಳ್ಳಾರಿ ನಗರದ ಡಾ. ರಾಜ್ ರಸ್ತೆಯಲ್ಲಿರುವ ಜಿಲ್ಲಾ ಕೋವಿಡ್ – 19 ಆಸ್ಪತ್ರೆಯಲ್ಲಿನ ಐಸೋಲೇಷನ್ ವಾರ್ಡ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮೇ 17 ರಂದು ಸೋಂಕಿರುವುದು ಪತ್ತೆಯಾಗಿತ್ತು.
ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎನ್.ಬಸರೆಡ್ಡಿ ನೇತೃತ್ವದಲ್ಲಿ ಬೆಂಗಳೂರಿನ ನುರಿತ ತಜ್ಞರಿಂದ ಪಿ-1185 ರೋಗಿಗೆ ಸತತ ಚಿಕಿತ್ಸೆ ನೀಡಿದರೂ ಫಲಿಸಲಿಲ್ಲ. ಹೀಗಾಗಿ ಚಿಕಿತ್ಸೆ ಫಲಿಸದೇ ಇಂದು ಬೆಳಗಿನ ಜಾವ 5ರ ವೇಳೆಗೆ ಮೃತಪಟ್ಟರು ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದ್ದಾರೆ.
ಈ ಮೂಲಕ ರಾಜ್ಯದಲ್ಲಿ ಕೊರೊನಾ ಗೆ ಬಲಿಯಾದವರ ಸಂಖ್ಯೆ 38 ಕ್ಕೆ ಏರಿಕೆಯಾಗಿದೆ.
ಕಂಟೈನ್ಮೆಂಟ್ ಪ್ರದೇಶ:
ಸೋಂಕಿತ ವ್ಯಕ್ತಿ ತಂಗಿದ್ದ ನಗರದ ಸತ್ಯನಾರಾಯಣಪೇಟೆಯ ಗಣೇಶ ಕಾಲೋನಿಯ 6ನೇ ಕ್ರಾಸ್ನ 100 ಮೀಟರ್ ಸುತ್ತಲಿನ ಪ್ರದೇಶವನ್ನು ಕಂಟೈನ್ಮೆಂಟ್ ಪ್ರದೇಶವೆಂದು ಜಿಲ್ಲಾಡಳಿತ ಘೋಷಿಸಿದೆ.
ಪಾಲಿಕೆಯ ಪೌರ ಕಾರ್ಮಿಕರು ಗಣೇಶ್ ಕಾಲೋನಿಯ ಸುತ್ತಮುತ್ತಲಿನ 100 ಮೀಟರ್ ಒಳಗೆ ಔಷಧಿ ಸಿಂಪಡಿಸಿದರು. ಇಲ್ಲಿ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದ್ದು, ಕಾಲೋನಿಯಲ್ಲಿದ್ದ ವ್ಯಕ್ತಿಗೆ ಕೊರೊನಾ ಪಾಸಿಟಿವ್ ಬಂದಿದೆ. ಹೀಗಾಗಿ ಯಾರು ಮನೆಯಿಮದ ಹೋರಗಡೆ ಬರಬಾರದು ಎಂದು ಮಹಾನಗರ ಪಾಲಿಕೆಯ ಆರೋಗ್ಯ ಅಧಿಕಾರಿಗಳು ಮತ್ತು ಹೆಲ್ತ್ ಇನ್ಸ್ಪೆಕ್ಟರ್ ಧ್ವನಿವರ್ಧಕಗಳ ಮೂಲಕ ಹೇಳಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ