ಬೆಂಗಳೂರು :
ಕಾಂಗ್ರೆಸ್ ಪಕ್ಷದ ಟ್ರಬಲ್ ಶೂಟರ್, ಸಚಿವ ಡಿ. ಕೆ ಶಿವಕುಮಾರ್ ಗೆ ಬಿಗ್ ರಿಲೀಫ್ ಸಿಕ್ಕಿದ್ದು, ಐಟಿ ಇಲಾಖೆ ದಾಖಲಿಸಿದ್ದ ಮೂರು ಕೇಸ್ ಗಳಲ್ಲಿ ಡಿ. ಕೆ ಶಿವಕುಮಾರ್ ಆರೋಪ ಮುಕ್ತಗೊಂಡಿದ್ದಾರೆ.
ಸಾಕ್ಷ್ಯನಾಶ, ಅಸಂಬದ್ಧ ಹೇಳಿಕೆ, ಚೀಟಿ ಹರಿದ ಪ್ರಕರಣದ ಸಂಬಂಧ ಐ.ಟಿ ಇಲಾಖೆ ಡಿ.ಕೆ. ಶಿವಕುಮಾರ್ ವಿರುದ್ಧ ದೂರು ದಾಖಲಿಸಿತ್ತು. ಇದನ್ನು ಪ್ರಶ್ನಿಸಿ ಡಿ.ಕೆ.ಶಿವಕುಮಾರ್ ಜನಪ್ರತಿನಿಧಿ ನ್ಯಾಯಾಲಯದ ಮೊರೆ ಹೋಗಿದ್ದರು.
ಇಂದಿಗೆ ತೀರ್ಪು ಕಾಯ್ದಿರಿಸಿದ್ದ ಕೋರ್ಟ್ ಸಾಕ್ಷ್ಯನಾಶ, ಅಸಂಬದ್ಧ ಹೇಳಿಕೆ, ಚೀಟಿ ಹರಿದ ಪ್ರಕರಣಗಳಲ್ಲಿ ಡಿ.ಕೆ.ಶಿವಕುಮಾರ್ ಆರೋಪ ಮುಕ್ತ ಎಂದು ಹೇಳಿದೆ.
ಇನ್ನು ಸಚಿವರ ವಿರುದ್ಧ ಹವಾಲ ದಂಧೆ ಆರೋಪ ಪ್ರಕರಣ ಇದೆ. ಇದು ಹೈಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದೆ. ಇದೀಗ ನಾಲ್ಕು ಪ್ರಾಸಿಕ್ಯೂಷನ್ ಕೇಸ್ಗಳಲ್ಲಿ ಮೂರು ಪ್ರಕರಣಗಳಲ್ಲಿ ಡಿಕೆಶಿಗೆ ರಿಲೀಫ್ ಸಿಕ್ಕಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ