ಕನಕಪುರ :
ಖಾಸಗಿ ವೈದ್ಯ ದಂಪತಿಗಳಿಗೆ ಸೋಂಕು ದೃಢಪಟ್ಟ ಕಾರಣ, ಇವರ ಬಳಿ ಚಿಕಿತ್ಸೆ ಪಡೆದವರು ಸ್ವಯಂ ಕ್ವಾರಂಟೈನ್ ಗೆ ಒಳಗಾಗಲು ಕನಕಪುರದ ಸ್ಥಳೀಯ ಆಡಳಿತ ಸೂಚನೆ ಹೊರೆಡಿಸದೆ.
ಸೋಮವಾರ 85 ವರ್ಷದ ವೃದ್ಧರೊಬ್ಬರು ಕೋವಿಡ್-19 ಸೋಂಕು ತಗುಲಿ ಮೃತಪಟ್ಟಿದ್ದರು. ಸಾವಿಗೂ ಮುನ್ನ ಮೃತ ವೃದ್ಧ ಕನಕಪುರದ ಎಂ.ಜಿ ರಸ್ತೆಯಲ್ಲಿರುವ ನವೋದಯ ಆರೋಗ್ಯ ಕೇಂದ್ರ ( ಡಾ.ಚೇತನ್ ಟೇಂಕರ್ ಆಸ್ಪತ್ರೆ) ಚಿಕಿತ್ಸೆ ಪಡೆದಿದ್ದರು. ಇವರನ್ನು ಕ್ವಾರಂಟೈನ್ ಗೆ ಒಳಪಡಿಸಿ ಗಂಟಲು ದ್ರವ ಪರೀಕ್ಷೆ ನಡೆಸಲಾಗಿತ್ತು. ಇದೀಗ ಚಿಕಿತ್ಸೆ ನೀಡಿದ ವೈದ್ಯರಿಗೆ ಸೋಂಕು ತಗುಲಿದೆ.
ಪತ್ನಿಯೂ ಸಹ ವೈದ್ಯರಾಗಿದ್ದು, ಸ್ತ್ರೀರೋಗ ತಜ್ಞರಾಗಿದ್ದು ಅವರಿಗೂ ಸೋಂಕು ತಗುಲಿದೆ.
ಕನಕಪುರ ನಗರಸಭೆಯ ಆಯುಕ್ತರು ಸಾರ್ವಜನಿಕ ಪ್ರಕಟಣೆ ಹೊರಡಿಸಿದ್ದಾರೆ, ಜೂನ್ 6 ರಿಂದ ಈವರೆಗೆ ಈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವ ಎಲ್ಲರೂ ಸ್ವಯಂ ಪ್ರೇರಿತರಾಗಿ ಕ್ವಾರಂಟೈನ್ ಗೆ ಒಳಗಾಗಬೇಕು ಎಂದು ಸೂಚಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ