ಹಾವೇರಿ
ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು ಹಾನಗಲ್ ತಾಲೂಕಿನ ಅಕ್ಕಿಆಲೂರ ಕಿತ್ತೂರ ರಾಣಿ ಚನ್ನಮ್ಮ ವಸತಿ ಶಾಲೆಗೆ ಶುಕ್ರವಾರ ಅನಿರೀಕ್ಷಿತ ಭೇಟಿ ಮೂಲಭೂತ ಸೌಕರ್ಯಗಳು ಹಾಗೂ ವಿದ್ಯಾರ್ಥಿಗಳ ಕಲಿಕಾ ಸಾಮಥ್ರ್ಯ ಕುರಿತಂತೆ ಪರಿಶೀಲಿಸಿದರು.ಈ ಸಂದರ್ಭದಲ್ಲಿ ಕಿತ್ತೂರ ಶಾಲಾ ಮಕ್ಕಳ ಕಲಿಕಾ ಆಸಕ್ತಿ ಕಂಡು ಪ್ರಶ್ನೋತ್ತರ ಸಂವಾದಲ್ಲಿ ಪಾಲ್ಗೊಂಡರು. ಕೆಲಹೊತ್ತು ಮಕ್ಕಳಿಗೆ ಪಾಠಮಾಡಿದರು, ಕೊನೆಯಲ್ಲಿ ವಿದ್ಯಾರ್ಥಿಗಳೊಂದಿಗೆ ವಸತಿ ಶಾಲೆಯ ಅಡುಗೆಯವರು ತಯಾರಿಸಿದ ಚಪಾತಿ, ಪಲ್ಯ, ಅನ್ನ -ಸಂಬಾರ ಸವಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳ ನಡೆಕಂಡು ವಿದ್ಯಾರ್ಥಿನಿಯರು ಸಂಭ್ರಮಿಸಿದರು. ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಶ್ರೀಮತಿ ಚೈತ್ರಾ ಹಾಗೂ ಶಾಲಾ ಶಿಕ್ಷಕರು ಹಾಗೂ ವಾರ್ಡ್‍ನಗಳು ಉಪಸ್ಥಿತರಿದ್ದರು.