ಬೆಂಗಳೂರು:
ಉಪ ಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್ ಅವರ ಪುತ್ರಿ ಶನಾ ಬೆಂಗಳೂರಿನ ರಸ್ತೆಗಳಲ್ಲಿ ನಿಯಮ ಮೀರಿ ವಾಹನ ಚಾಲನೆ ಮಾಡಿ ಸುದ್ಧಿಯಾಗಿದ್ದಾರೆ.
ಸಿಟಿಯಲ್ಲಿ ಇಂತಿಷ್ಟು ಪ್ರಮಾಣದಲ್ಲಿ ಮಾತ್ರ ಕಾರನ್ನು ಚಲಾವಣೆ ಮಾಡುವುದಕ್ಕೆ ಅವಕಾಶವಿರುತ್ತದೆ. ಆದರೆ ಅದನ್ನೂ ಮೀರಿ ಶಾನಾ ಅವರು ಕಾರನ್ನು ಚಲಾವಣೆ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದ್ದು, ಈ ಬಗ್ಗೆ ನಗರ ಪೋಲಿಸರು ಯಾಕೆ ಸುಮ್ಮನೆ ಇದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿದೆ.
ಶನಾ ರ್ಯಾಷ್ ಡ್ರೈವ್ ಮಾಡುತ್ತಿರುವುದನ್ನು ಸಾರ್ವಜನಿಕರು ವಿಡಿಯೋ ಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದೆ. ಡಿಸಿಎಂ ‘ಮಗ’ಳಿಂದ ಟ್ರಾಫಿಕ್ ರೂಲ್ಸ್ ಉಲ್ಲಂಘನೆ, ಯಾಗಿದ್ದರು ಕೂಡ ಪೋಲಿಸ್ ಇಲಾಖೆ ಗಪ್ ಚುಪ್ ಆಗಿದೆ ಎನ್ನಲಾಗಿದೆ. ಡಿಸಿಎಂ ಮಗಳ ಈ ವರ್ತನೆಗೆ ಪೊಲೀಸರು ಯಾವುದೇ ಕ್ರಮಕೈಗೊಂಡಿಲ್ಲ ಎಂದು ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.