ದೊಣ್ಣೆಯಿಂದ ಹೊಡೆದು ಯುವಕನ ಬರ್ಬರ ಹತ್ಯೆ!!

ಮಂಗಳೂರು:

      ದೊಣ್ಣೆಯಿಂದ ಥಳಿಸಿ ಯುವಕನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಗರದ ಹೊರ ವಲಯದ ಮೂಡುಬಿದಿರೆ ಸಮೀಪದ ಮಿಜಾರು ದಡ್ಡಿ ಎಂಬಲ್ಲಿ 

      ಮಿಜಾರು ದಡ್ಡಿ ನಿವಾಸಿ ನವೀನ್ ಕುಮಾರ್ (27) ಮೃತ ಯುವಕ. ಸ್ಥಳೀಯ ನಿವಾಸಿಗಳಾದ ರಮೇಶ್(35) ಮತ್ತು ನಿತ್ಯಾನಂದ(40)ಹತ್ಯೆ ಆರೋಪಿಗಳಾಗಿದ್ದಾರೆ.

      ನವೀನ್ ನಿನ್ನೆ ರಾತ್ರಿ ದೂಮಚಡವು ಕ್ರಾಸ್ ಬಳಿ ತನ್ನ ಸ್ನೇಹಿತರೊಬ್ಬರೊಂದಿಗೆ ಮಾತನಾಡುತ್ತಿದ್ದ ವೇಳೆ ಆರೋಪಿಗಳಾದ ರಮೇಶ್ ಮತ್ತು ನಿತ್ಯಾನಂದ ಕ್ಷುಲ್ಲಕ ಕಾರಣವನ್ನು ಮುಂದಿಟ್ಟು ನವೀನ್ ಜೊತೆ ವಾಗ್ವಾದ ನಡೆಸಿದ್ದಾರೆ. ಈ ಸಂದರ್ಭ ಆರೋಪಿಗಳು ನವೀನ್ ಮೇಲೆ ದೊಣ್ಣೆಯಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ತಲೆಗೆ ಗಂಭೀರ ಗಾಯಗೊಂಡ ನವೀನ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

      ದುಬೈಯಲ್ಲಿ ಹೋಟೆಲ್ ಮ್ಯಾನೇಜ್‌ಮೆಂಟ್ ಉದ್ಯೋಗಿಯಾಗಿದ್ದ ನವೀನ್ ಮೂರು ತಿಂಗಳ ಹಿಂದೆ ಊರಿಗೆ ಆಗಮಿಸಿದ್ದರು ಎನ್ನಲಾಗಿದೆ. ಕೊಲೆ ನಡೆದ ಸ್ಥಳದಲ್ಲಿ ನೂರಾರು ಮಂದಿ ಜಮಾಯಿಸಿದ್ದರಿಂದ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.

      ಬಜ್ಪೆ ಪೊಲೀಸ್​ ಠಾಣೆಯಲ್ಲಿ ಕೊಲೆ ಸಂಬಂಧ ದೂರು ದಾಖಲಾಗಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

Recent Articles

spot_img

Related Stories

Share via
Copy link