ಸಂಜೆ 5 ಗಂಟೆಗೆ ಲೋಕಸಭಾ ಚುನಾವಣಾ ದಿನಾಂಕ ಪ್ರಕಟ!!?

     ಇಂದು ಸಂಜೆ 5 ಗಂಟೆಗೆ ದೆಹಲಿಯ ವಿಜ್ಞಾನ ಭವನದಲ್ಲಿ ಕೇಂದ್ರ ಚುನಾವಣಾ ಆಯೋಗ ಪತ್ರಿಕಾಗೋಷ್ಠಿಯನ್ನು ಕರೆದಿದೆ. ನಾಲ್ಕು ರಾಜ್ಯಗಳ ವಿಧಾನಸಭೆ, ಲೋಕಸಭಾ ಚುನಾವಣೆ ದಿನಾಂಕ ಘೋಷಣೆ ಮಾಡಲಾಗುತ್ತದೆ ಎಂದು ರಾಷ್ಟ್ರೀಯ ಮಾಧ್ಯಮಗಳ ವರದಿ ಹೇಳಿದೆ.
      ಈಗಾಗಲೇ ಲೋಕಸಭಾ ಚುನಾವಣೆ 7ರಿಂದ 8  ಹಂತದಲ್ಲಿ ನಡೆಯಲಿದೆ ಎನ್ನುವ ಮಾಹಿತಿಯನ್ನು ಆಯೋಗ ಹೇಳಿತ್ತು. ಭದ್ರತೆಯ ನಿಟ್ಟಿನಲ್ಲಿ ಇಷ್ಟೊಂದು ಹಂತದಲ್ಲಿ ಚುನಾವಣೆ ನಡೆಸುವುದಾಗಿ ಆಯೋಗ ಸ್ಪಷ್ಟನೆ ನೀಡಿತ್ತು.

      2014ರ ಲೋಕಸಭೆ ಚುನಾವಣೆ ವೇಳೆ ಮಾರ್ಚ್​ ಮೊದಲ ವಾರದಲ್ಲಿ ಆಯೋಗ ದಿನಾಂಕ ಘೋಷಣೆ ಮಾಡಿತ್ತು. ಆದರೆ, ಈ ಬಾರಿ ಕೊಂಚ ವಿಳಂಬವಾಗಿದೆ. ಇಂದಿನ ಸುದ್ದಿಗೋಷ್ಠಿಯಲ್ಲಿ ಲೋಕಸಮರದ ದಿನಾಂಕ ಘೋಷಣೆ ಆಗಲಿದೆ ಎನ್ನುವ ಸುದ್ದಿ ಬಲವಾಗಿ ಕೇಳಿಬರುತ್ತಿದೆ. ಒಂದು ವೇಳೆ ದಿನಾಂಕ ಘೋಷಣೆ ಆದಲ್ಲಿ ಆ ಕ್ಷಣದಿಂದಲೇ ನೀತಿ ಸಂಹಿತೆ ಜಾರಿಗೆ ಬರಲಿದೆ.

      ಲೋಕಸಭಾ ಚುನಾವಣೆಯ ಜತೆಗೆ ಆಂಧ್ರಪ್ರದೇಶ, ಒಡಿಶಾ, ಸಿಕ್ಕಿಂ ಮತ್ತು ಅರುಣಾಚಲ ಪ್ರದೇಶಗಳ ವಿಧಾನಸಭೆ ಚುನಾವಣೆಗಳನ್ನು ನಡೆಸುವ ಬಗ್ಗೆ ಆಯೋಗ ನಿರ್ಧಾರ ಪ್ರಕಟಿಸಬಹುದು ಎನ್ನಲಾಗಿದೆ.
 
 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

Recent Articles

spot_img

Related Stories

Share via
Copy link
Powered by Social Snap