ಬೆಂಗಳೂರು :
ಮೈತ್ರಿ ಸರ್ಕಾರಕ್ಕೆ ಯೋಗ್ಯತೆ ಇದ್ದರೆ ಆಡಳಿತ ನಡೆಸಲಿ ಇಲ್ಲದಿದ್ದರೆ ಅಧಿಕಾರ ಬಿಟ್ಟು ತೊಲಗಲಿ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಗುಡುಗಿದ್ದಾರೆ.
ಮಧ್ಯಂತರ ಚುನಾವಣೆ ಆಗುತ್ತದೆ ಎಂಬ ಮಾಜಿ ಪ್ರಧಾನಿ ದೇವೇಗೌಡರ ಹೇಳಿಕೆಗೆ ಬಿಎಸ್ವೈ ಪ್ರತಿಕ್ರಿಯೆ ನೀಡಿ ಮಾತನಾಡಿದ ಅವರು, ಮಧ್ಯಂತರ ಚುನಾವಣೆ ಆಗಲು ನಾವು ಬಿಡಲ್ಲ ಎಂದರು. ಯೋಗ್ಯತೆ ಇದ್ದರೆ ಆಡಳಿತ ಮಾಡಲಿ, ಇಲ್ಲವಾದರೆ ಬಿಟ್ಟುಹೋಗಲಿ ಎಂದು ನೇರಾನೇರಾ ವಾಗ್ದಾಳಿ ನಡೆಸಿದರು.
ದೋಸ್ತಿ ಸರ್ಕಾರದಲ್ಲಿ ಏನೂ ಸರಿ ಇಲ್ಲ. ಮಧ್ಯಂತರ ಚುನಾವಣೆ ನಡೆಯೋ ಬಗ್ಗೆ ಸಂಶಯ ಇಲ್ಲ ಎಂಬ ದೇವೇಗೌಡರ ಹೇಳಿಕೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಕಿಡಿಕಾರಿದ್ದಾರೆ.
ಈ ಬಗ್ಗೆ ಮಾತನಾಡಿದ ಯಡಿಯೂರಪ್ಪನವರು, ನಾವು105 ಜನ ಶಾಸಕರಿದ್ದೇವೆ. ಮಧ್ಯಂತರ ಚುನಾವಣೆ ಆಗಲು ಬಿಡುವುದಿಲ್ಲ. ಯೋಗ್ಯತೆ ಇದ್ರೆ ಆಡಳಿತ ಮಾಡಲಿ ಇಲ್ಲದಿದ್ದರೆ ಬಿಟ್ಟು ಹೋಗಲಿ ಎಂದು ಸಮ್ಮಿಶ್ರ ಸರ್ಕಾದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ನವರು ಮಧ್ಯಂತರ ಚುನಾವಣೆ ಬೇಡ ಅಂತಿದ್ದಾರೆ. ಜೆಡಿಎಸ್ ನವರು ಮಧ್ಯಂತರ ಚುನಾವಣೆ ಬೇಕು ಅಂತಿದ್ದಾರೆ. ಆದರೆ ನಾವು ಮಧ್ಯಂತರ ಚುನಾವಣೆ ನಡೆಯಲು ಬಿಡುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ