ಬಳ್ಳಾರಿ :
ಈ ಬಾರಿಯ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಮಾಜಿ ಸಚಿವ, ಜನಾರ್ದನ ರೆಡ್ಡಿ ಅವರು ಮತದಾನ ಮಾಡುವ ಅವಕಾಶವನ್ನು ಕಳೆದುಕೊಂಡಿದ್ದಾರೆ.
ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜನಾರ್ದನ ರೆಡ್ಡಿ ಬಳ್ಳಾರಿಗೆ ಎಂಟ್ರಿ ಮಾಡದಂತೆ ಕೋರ್ಟ್ ಷರತ್ತು ವಿಧಿಸಿತ್ತು. ಈ ಮಧ್ಯೆ ರೆಡ್ಡಿ ಮತದಾನ ಮಾಡಲು ಅವಕಾಶ ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ ಕೋರ್ಟ್ ರೆಡ್ಡಿ ಮನವಿಯನ್ನು ಅಂಗೀಕರಿಸಲಿಲ್ಲ.
ಅಲ್ಲದೇ ಜನಾರ್ದನರೆಡ್ಡಿ ಗದಗ್‍ನಲ್ಲಿ ಮತದಾನಕ್ಕೆ ನೋಂದಣಿ ಮಾಡಿಸಿರುವುದು ಕೂಡ ರದ್ದಾಗಿದೆ. ಹೀಗಾಗಿ ಅವರು ಈ ಬಾರಿ ಮತದಾನ ಮಾಡುವುದಿಲ್ಲ ಎನ್ನಲಾಗಿದೆ. ಜನಾರ್ದನರೆಡ್ಡಿ ಪತ್ನಿ, ಮಗ ಹಾಗೂ ಕುಟುಂಬಸ್ಥರು ಇಂದು ಬಳ್ಳಾರಿಯಲ್ಲಿ ತಮ್ಮ ಹಕ್ಕು ಚಲಾಯಿಸಲಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ