ತುಮಕೂರು:
ಮಾಜಿ ಮೇಯರ್ ರವಿಕುಮಾರ್ ಆಲಿಯಾಸ್ ಗಡ್ಡ ರವಿ ಹತ್ಯೆ ದಿನೇ ದಿನೇ ಮಹತ್ವದ ತಿರುವು ಪಡೆಯುತ್ತಿದ್ದು, ಆರೋಪಿಗಳ ವಿರುದ್ದ ಕೋಕಾ ಕಾಯಿದೆಯಡಿ ಪೊಲೀಸರು ಇಂದು ಪ್ರಕರಣ ದಾಖಲಿಸಿದ್ದಾರೆ.
ಅತಿ ಗಂಭೀರ ಸ್ವರೂಪದ ಮತ್ತು ವಿರಳ ಪ್ರಕರಣಗಳಲ್ಲಿ ಮಾತ್ರ ಬಳಲ್ಪಡುವ ಕೋಕಾ ಕಾಯ್ದೆಯನ್ನು ಭಾರಿ ಚರ್ಚೆಗೆ ಗ್ರಾಸವಾಗಿದ್ದ ಮಾಜಿ ಮೇಯರ್ ರವಿಕುಮಾರ್ ಹತ್ಯೆ ಪ್ರಕರಣದ ಎಲ್ಲಾ ಆರೋಪಿಗಳ ವಿರುದ್ದ ದಾಖಲಿಸಿದ್ದು, ಈ ಪ್ರಕರಣದಡಿ ಎಲ್ಲಾ ಆರೋಪಿಗಳು ವಿಚಾರಣೆಗೆ ಹಾಜರಾಗಬೇಕಿದೆ.
ಏನಿದು ಕೋಕಾ… ಕಾಯಿದೆ?
ಗುಂಪುಗೂಡಿ ಭೀಕರ ಕೃತ್ಯ ನಡೆಸುವರ ವಿರುದ್ಧ ಕರ್ನಾಟಕ ಕಂಟ್ರೋಲ್ ಆಫ್ ಆರ್ಗನೈಸ್ಡ್ ಕ್ರೈಂ ಆಕ್ಟ್ (ಕೋಕಾ)ನ್ನು ದಾಖಲಿಸಲಾಗುತ್ತದೆ.
ಅತೀ ಗಂಭೀರ ಸ್ವರೂಪದ ಕೃತ್ಯಗಳಲ್ಲಿ ಈ ಪ್ರಕರಣವನ್ನು ಪೊಲೀಸರು ದಾಖಲಿಸುತ್ತಾರೆ.
ಆರೋಪಿಗಳಿಗೆ ಕನಿಷ್ಠ 6 ತಿಂಗಳವರೆಗೆ ನ್ಯಾಯಾಲಯದಿಂದ ಜಾಮೀನು ಸಿಗುವುದಿಲ್ಲ. ಈ ಕಾಯ್ದೆಯಡಿ ಪ್ರಕರಣದ ವಿಚಾರಣೆಯು ವಿಶೇಷವಾಗಿರುತ್ತದೆ.
ಮೊದಲ ಬಾರಿಗೆ ಕೋಕಾ ಕಾಯ್ದೆ ಅಡಿ ಪ್ರಕರಣವೊಂದನ್ನು ಪೊಲೀಸರು ದಾಖಲಿಸಿದ್ದು, ರವಿಕುಮಾರ್ ಹತ್ಯೆ ಪ್ರಕರಣದಲ್ಲಿರುವ ಆರೋಪಿಗಳ ವಿರುದ್ಧವೂ ವಿಚಾರಣೆ ನಡೆಯುತ್ತಿದೆ. ಅಪರೂಪದ ಪ್ರಕರಣಗಳನ್ನು ಮಾತ್ರ ಕೋಕಾ ಕಾಯ್ದೆಯಡಿ ದಾಖಲಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ದಿವ್ಯಾ ಗೋಪಿನಾಥ್ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ