ಬೆಂಗಳೂರು : 4 ಸಾವಿರ ಸ್ಥಳಗಳಲ್ಲಿ ಫ್ರೀ-ವೈಫೈ ಸ್ಪಾಟ್!!

ಬೆಂಗಳೂರು:

      ಬೆಂಗಳೂರಿನ ವಿವಿಧ ಭಾಗಗಳಲ್ಲಿ ವೈಫೈ ಸ್ಪಾಟ್‌ ಸ್ಥಾಪಿಸಿ, ಉಚಿತ ಇಂಟರ್ನೆಟ್‌ ಸೇವೆ ಒದಗಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಾ. ಸಿ.ಎನ್‌. ಅಶ್ವತ್ಥನಾರಾಯಣ ತಿಳಿಸಿದರು.

      ಬೆಂಗಳೂರು ಟೆಕ್ ಸಮ್ಮೇಳನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ನಗರದ ಜನರ ಬಹುದಿನಗಳ ಬೇಡಿಕೆ ವೈಫೈ ಸ್ಪಾಟ್ ಅಳವಡಿಕೆಗೆ ಕಾಲ ಕೂಡಿಬಂದಿದೆ. ನಗರದ 800 ಕಿ.ಮೀ. ವ್ಯಾಪ್ತಿಯಲ್ಲಿ ಕ್ಷಿಪ್ರ ವೇಗದ ಅಂತರ್ಜಾಲ ಸಂಪರ್ಕ ಕಲ್ಪಿಸಲು ವೈಫೈ ಹಾಟ್‌ಸ್ಪಾಟ್‌ಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ಡಿಜಿಟಲ್‌ ಕರ್ನಾಟಕದ ಮೂಲಕ ಡಿಜಿಟಲ್‌ ಇಂಡಿಯಾದ ಕನಸು ಸಾಕಾರಗೊಳಿಸುವುದು ನಮ್ಮ ಗುರಿ. ನಗರದಲ್ಲಿ ಇನ್ನು ಮುಂದೆ ಪ್ರತಿಯೊಬ್ಬರಿಗೂ ಕನಿಷ್ಠ ಒಂದು ಗಂಟೆ ಉಚಿತ ಇಂಟರ್‌ನೆಟ್‌ ಒದಗಿಸಲಾಗುತ್ತದೆ. ಈ ನಿಟ್ಟಿನಲ್ಲಿ 4000 ವೈಫ್ಐ ಸ್ಪಾಟ್‌ಗಳನ್ನು ಸ್ಥಾಪಿಸಲಾಗುವುದು. ಸ್ಮಾರ್ಟ್‌ ಸಿಟಿಗಾಗಿ ವೈಫೈ ಟವರ್‌, ಕ್ಯಾಮರಾ ಸೇರಿದಂತೆ ಎಲ್ಲ ಸೌಕರ್ಯಯವನ್ನು ಒದಗಿಸಲು 100 ಕೋಟಿ ರೂ. ವೆಚ್ಚವಾಗುವುದು” ಎಂದು ತಿಳಿಸಿದ್ದಾರೆ.

      “ಇಂಟರ್ನೆಟ್‌ ಸೌಲಭ್ಯ ಒದಗಿಸುವ ಸಂಬಂಧ ಆ್ಯಕ್ಟ್‌ ಸಂಸ್ಥೆ ಜತೆ ಸರ್ಕಾರ ಮಾತುಕತೆ ನಡೆಸಿತ್ತು. ಸಮಾಜ ಸೇವೆ ದೃಷ್ಟಿಯಿಂದ ಇಂಟರ್ನೆಟ್‌ ಸೇವೆ ಒದಗಿಸಲು ಸಂಸ್ಥೆ ಮುಂದೆ ಬಂದಿದೆ ಹೊರತು ಪ್ರಚಾರದ ಉದ್ದೇಶದಿಂದ ಅಲ್ಲ. ಕಾನೂನು ಚೌಕಟ್ಟಿನ ಪರಿಮಿತಿಯಲ್ಲಿ, ಪಾಲಿಕೆ ವತಿಯಿಂದ ವೈಫೈ ಸ್ಟಾಟ್‌ಗಳನ್ನು ಅಳವಡಿಸಲಾಗುವುದು. ನಾವು ಇದಕ್ಕೆ ಯಾವುದೇ ಹಣ ವ್ಯಯಿಸುತ್ತಿಲ್ಲ. ನಾಲ್ಕು ವರ್ಷಗಳ ಬೇಡಿಕೆ ಈಗ ನೆರವೇರುತ್ತಿದೆ. ಯೋಜನೆ ಪೂರ್ಣಗೊಳ್ಳಲು 9 ತಿಂಗಳು ಬೇಕಾಗುತ್ತದೆ,”ಎಂದು ಸಚಿವರು ವಿವರಿಸಿದರು.

1 ಗಿಗಾ ಬೈಟ್‌ ಸ್ಪೀಡ್‌ ಇಂಟರ್ನೆಟ್‌ :

      “ಬೆಂಗಳೂರನ್ನು ಡಿಜಿಟಲ್‌ ಸಿಟಿ ಮಾಡುವ ನಿಟ್ಟಿನಲ್ಲಿ ದೊರೆತಿರುವ ಈ ಅವಕಾಶಕ್ಕೆ ಧನ್ಯವಾದ ಹೇಳುತ್ತೇವೆ. ಹಲವಾರು ಸಂದರ್ಭಗಳಲ್ಲಿ ನಾವು ಸರ್ಕಾರದ ಜತೆ ಕೈ ಜೋಡಿಸಿದ್ದೇವೆ. ಡಿಜಿಟಲ್‌ ಸಂಪರ್ಕದ ಮೂಲಕ ನಗರದ ಜನತೆಗೆ ನಮ್ಮ ಸೇವೆ ಒದಗಿಸಲು ಮುಂದಾಗಿದ್ದೇವೆ. 1 ಗಿಗಾ ಬೈಟ್‌ ಸ್ಪೀಡ್‌ ಇಂಟರ್ನೆಟ್‌ ಒದಗಲಿಸಲು ನಾವು ಬದ್ಧ. ಉಪ ಮುಖ್ಯಮಂತ್ರಿ ಡಾ. ಸಿ.ಎನ್‌. ಅಶ್ವತ್ಥನಾರಾಯಣ ಅವರ ಮಾರ್ಗದರ್ಶನದಲ್ಲಿ ಬಿಬಿಎಂಪಿ ಸಹಯೋಗದಲ್ಲಿ ನಗರದಲ್ಲಿ ಸಂಪರ್ಕ ಕ್ರಾಂತಿ ನಡೆಯಲಿದೆ. ಈ ಮೂಲಕ ನಗರದ ಜನ ಜೀವನದಲ್ಲಿ ಬದಲಾವಣೆ ತರುವ ಉದ್ದೇಶ ನಮ್ಮದು” ಎಂದು ಆಕ್ಟ್‌ ಸಿಇಓ ಬಾಲಾ ಹೇಳಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link