ಬೆಳಗಾವಿ:
ಜಮೀನಿನಲ್ಲಿ ಕುರಿ, ಎಮ್ಮೆ, ಮೇಕೆಗಳನ್ನು ಮೇಯಿಸಬೇಡಿ ಎಂದು ಹೇಳಿದ್ದಕ್ಕೆ ಜಮೀನಿನ ಮಾಲೀಕನನ್ನೇ ಬರ್ಬರವಾಗಿ ಹತ್ಯೆಗೈದ ಘಟನೆ ಇಲ್ಲಿನ ಮುತ್ಯಾನಟ್ಟಿ ಗ್ರಾಮದಲ್ಲಿ ನಡೆದಿದೆ.
ಸಿದ್ರಾಯಿ ಕಣ್ಣಪ್ಪ ನಾಯಿಕ(30) ಹತ್ಯೆಯಾದ ವ್ಯಕ್ತಿ. ನಿನ್ನೆ ಬೆಳಗ್ಗೆ ಜಮೀನಿನಲ್ಲಿ ಹೇಳದೆ ಕೇಳದೆ ಕುರಿ ಮೇಯಿಸುತ್ತಿದ್ದನ್ನು ಗಮನಿಸಿದ ಮಾಲೀಕ ಸಿದ್ರಾಯಿ, ಕುರಿ ಮೇಯಿಸದಂತೆ ಎಚ್ಚರಿಕೆ ನೀಡಿದ್ದರು. ಇದಕ್ಕೆ ಆಕ್ರೋಶಗೊಂಡ 6 ಮಂದಿ ಮನೆ ಮುಂದೆ ನಿಂತಿದ್ದ ಸಿದ್ರಾಯಿ ಯನ್ನು ಮಾರಾಕಸ್ತ್ರಗಳಿಂದ ಕುತ್ತಿಗೆ ಹಿಂಭಾಗ ಕೊಚ್ಚಿ ಹಲ್ಲೆ ಮಾಡಿ ಬರ್ಬರವಾಗಿ ಹತ್ಯೆಗೈದು ಪರಾರಿಯಾಗಿದ್ದಾರೆ. ಎನ್ನಲಾಗಿದೆ.
ಪ್ರಕರಣ ಕಾಕತಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ