ನವದೆಹಲಿ:
ಭಾರತದಲ್ಲಿ ಸಂಭವಿಸಿದ ದೊಡ್ಡ ದುರಂತಗಳಲ್ಲಿ ಒಂದಾದ ಭೋಪಾಲ್ ಅನಿಲ ದುರಂತದ ಸಂತ್ರಸ್ತರಿಗೆ ಅಮೆರಿಕ ಮೂಲದ ಯೂನಿಯನ್ ಕಾರ್ಬೈಡ್ ಕಾರ್ಪೊರೇಶನ್ನಿಂದ ಹೆಚ್ಚುವರಿ ಪರಿಹಾರಕ್ಕಾಗಿ ಸಲ್ಲಿಸಿದ್ದ ಕೇಂದ್ರದ ಮನವಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರ ಮಾಡಿದೆ.
ಜಸ್ಟಿಸ್ ಸಂಜಯ್ ಕಿಶನ್ ಕೌಲ್ ನೇತೃತ್ವದ ಐವರು ನ್ಯಾಯಾಧೀಶರ ಸಂವಿಧಾನ ಪೀಠವು ಇತ್ಯರ್ಥದ ಎರಡು ದಶಕಗಳ ನಂತರ ಈ ಸಮಸ್ಯೆಯನ್ನು ತರಲು ಕೇಂದ್ರದಿಂದ ಯಾವುದೇ ತರ್ಕವಿಲ್ಲ ಎಂದು ಹೇಳಿದೆ. ಸಂತ್ರಸ್ತರಿಗಾಗಿ ಆರ್ಬಿಐ ಬಳಿ ಇರುವ 50 ಕೋಟಿ ರೂಪಾಯಿಯನ್ನು ಸಂತ್ರಸ್ತರ ಬಾಕಿ ಇರುವ ಕ್ಲೈಮ್ಗಳನ್ನು ಪೂರೈಸಲು ಯೂನಿಯನ್ ಆಫ್ ಇಂಡಿಯಾ ಬಳಸಿಕೊಳ್ಳುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.