ಬೆಂಗಳೂರು :
ಇಂದು ಬೆಳಗ್ಗೆ ನಿಧನರಾದ ಹಿರಿಯ ಸಾಹಿತಿ, ರಂಗಕರ್ಮಿ, ನಟ ಗಿರೀಶ್ ಕಾರ್ನಾಡ್ ಅವರ ಅಂತ್ಯಕ್ರಿಯೆ ಕಲ್ಲಪಳ್ಳಿ ವಿದ್ಯುತ್ ಚಿತಾಗಾರದಲ್ಲಿ ಅವರ ಕೊನೇ ಆಸೆಯಂತೆ ಧಾರ್ಮಿಕ ವಿಧಿ ವಿಧಾನಗಳಿಲ್ಲದೇ ನೆರವೇರಿಸಲಾಯಿತು.
ಅಂತ್ಯಸಂಸ್ಕಾರವನ್ನು ಯಾವುದೇ ಧಾರ್ಮಿಕ ವಿಧಿ ವಿಧಾನವಿಲ್ಲದೇ ವಿದ್ಯುತ್ ಚಿತಾಗಾರದಲ್ಲೇ ನಡೆಯಬೇಕೆಂಬುದು ಕಾರ್ನಾಡರ ಅಪೇಕ್ಷೆಯಾಗಿತ್ತು. ಆದ್ದರಿಂದ ಕುಟುಂಬಸ್ಥರೂ ಸಹಾ ಅದೇ ರೀತಿ ಅಂತ್ಯ ಸಂಸ್ಕಾರ ನಡೆಸಲು ನಿರ್ಧರಿಸಿದ್ದರು.
ಕುಟುಂಬಸ್ಥರನ್ನು ಮನವೊಲಿಸಲು ಸಚಿವ ಡಿ.ಕೆ.ಶಿವಕುಮಾರ್ ಪ್ರಯತ್ನ ಪಟ್ಟರೂ ಆಗಲಿಲ್ಲ. ಆದರೂ ಸರ್ಕಾರದ ವತಿಯಿಂದ ಹಾಜರಿದ್ದರು.
ನಂತರ ಮಾತನಾಡಿದ ಸಚಿವ ಡಿಕೆಶಿ, ಕಾರ್ನಾಡ್ ಕುಟುಂಬದವರು ಸರ್ಕಾರಿ ಗೌರವ ಸಲ್ಲಿಸಲು ಒಪ್ಪಲೇ ಇಲ್ಲ. ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರು ಕೂಡ ಕುಟುಂಬದವರ ಜೊತೆ ಮಾತನಾಡಿದರು. ಆದರೆ, ಅವರು ರಾಷ್ಟ್ರಧ್ವಜ ಸ್ವೀಕಾರ, ಉಳಿದ ಗೌರವ ಸ್ವೀಕಾರಕ್ಕೆ ಒಪ್ಪಲಿಲ್ಲ. ಹಾಗಾಗಿ ನಾನು ಅಂತ್ಯಕ್ರಿಯೆಯ ಕೊನೆವರೆಗೂ ಇದ್ದೆ. ಮೂರು ದಿನ ಶೋಕಾಚರಣೆ ಮುಂದುವರಿಯುತ್ತದೆ ಎಂದು ತಿಳಿಸಿದರು.
