ಮೈಸೂರು:
ಮೈಸೂರು ಜಿಲ್ಲೆ ನಂಜನಗೂಡಿನಲ್ಲಿ ನಡೆದಿದ್ದ ಬಾಲಕಿ ಹತ್ಯೆ ಪ್ರಕರಣಕ್ಕೆ ಸ್ಪೋಟಕ ತಿರುವು ದೊರೆತಿದೆ. ತನ್ನ ಅಕ್ರಮ ಸಂಬಂಧವನ್ನು ಬಾಲಕಿ ನೋಡಿದಳೆಂಬ ಕಾರಣಕ್ಕೆ ಆಕೆಯ ಚಿಕ್ಕಮ್ಮನೇ ಪ್ರಿಯಕರನೊಂದಿಗೆ ಸೇರಿ ಹತ್ಯೆ ಮಾಡಿರುವುದು ಈಗ ಬೆಳಕಿಗೆ ಬಂದಿದೆ.
ನವೆಂಬರ್ 16ರಂದು ಬಾಲಕಿಯ ಹತ್ಯೆ ನಡೆದಿದ್ದು, ಅಂದು ಬೆಳಿಗ್ಗೆ ಶಾಲೆಗೆ ಹೊರಟಿದ್ದ ಬಾಲಕಿ ತನ್ನ ಮನೆಯ ಹಿಂಬದಿಯಲ್ಲಿ ಶವವಾಗಿದ್ದಳು. ಈ ಘಟನೆ ಸಾರ್ವಜನಿಕರನ್ನು ಬೆಚ್ಚಿಬೀಳಿಸಿತ್ತು.
ಪ್ರಕರಣದ ತನಿಖೆ ನಡೆಸಿದ ಪೊಲೀಸರು ಇದೀಗ ಹಂತಕರನ್ನು ಪತ್ತೆ ಹಚ್ಚಿದ್ದಾರೆ. ಸಿದ್ದರಾಜು ಎಂಬಾತನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಬಾಲಕಿಯ ಚಿಕ್ಕಮ್ಮ ರಾಜಮ್ಮ ಎಂಬಾಕೆ ಆತನೊಂದಿಗೆ ಚೆಲ್ಲಾಟ ನಡೆಸುತ್ತಿರುವಾಗಲೇ ಬಾಲಕಿ ನೋಡಿದ್ದು, ಇದನ್ನು ಎಲ್ಲಿ ಮನೆಯವರ ಬಳಿ ಹೇಳುತ್ತಾಳೋ ಎಂಬ ಭಯಕ್ಕೆ ಇಬ್ಬರೂ ಸೇರಿ ಆಕೆಯನ್ನು ಹತ್ಯೆ ಮಾಡಿದ್ದಾರೆ.
ಬಳಿಕ ಬಾಲಕಿಯ ಅಂತ್ಯಸಂಸ್ಕಾರದಲ್ಲಿ ಅಳುತ್ತಲೇ ಇವರುಗಳು ಪಾಲ್ಗೊಂಡು ನಾಟಕವಾಡಿದ್ದಾರೆ. ತಮಗೆ ದೊರೆತ ಸುಳಿವಿನ ಮೇರೆಗೆ ಪೊಲೀಸರು ವಿಚಾರಣೆ ನಡೆಸಿದ ವೇಳೆ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ. ಈಗ ಇಬ್ಬರನ್ನೂ ಜೈಲಿಗಟ್ಟಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
