8ವರ್ಷದ ಬಾಲಕಿಯ ಜೀವವನ್ನೇ ತೆಗೆದ ಪಿನ್!

ಕಲಬುರಗಿ: 

       ಊಟ ಮಾಡುವಾಗ ಪಿನ್ ನುಂಗಿದ್ದ 8 ವರ್ಷದ ಬಾಲಕಿ ಮೃತಪಟ್ಟಿರುವ ಆಘಾತಕಾರಿ ಘಟನೆಯೊಂದು ಕಲಬುರಗಿ ಜಿಲ್ಲೆ ಸೇಡಂ ತಾಲ್ಲೂಕಿನ ಹಯ್ಯಾಳ್ ಗ್ರಾಮದಲ್ಲಿ ನಡೆದಿದೆ. 

        ಬಾಲಕಿ ಸ್ವಪ್ನಾ ಎಂಬ ಬಾಲಕಿ ಏಪ್ರಿಲ್ 22 ರಂದು ಊಟ ಮಾಡುವಾಗ ಆಕಸ್ಮಿಕವಾಗಿ ಪಿನ್ ನುಂಗಿದ್ದಾಳೆ  ಈ ಬಗ್ಗೆ ಬಾಲಕಿ ಕೂಡಲೇ ತನ್ನ ಪೋಷಕರಿಗೆ ತಿಳಿಸಿದ್ದಾಳೆ. ತಕ್ಷಣ ಅವರು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಹೈದರಾಬಾದಿನ ಖಾಸಗಿ ಆಸ್ಪತ್ರೆಗೆ ದಾಖಲಿಸುವಂತೆ ಸೂಚಿಸಿದ್ದರು. ಅಲ್ಲಿ ಬಾಲಕಿಗೆ ಆಪರೇಷನ್ ಮಾಡಿ ಪಿನ್ ತೆಗೆದಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಮಧ್ಯಾಹ್ನ ಆಕೆ ಮೃತಪಟ್ಟಿದ್ದಾಳೆ.

      ಈ ಸಂಬಂಧಕುರಕುಂಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

Recent Articles

spot_img

Related Stories

Share via
Copy link
Powered by Social Snap