ವಯನಾಡು ಭೂಕುಸಿತ : 11 ದಿನದ ನಂತರ ನಾಲ್ಕು ಮೃತ ದೇಹ ಪತ್ತೆ

ಪುಂಚಿರಿ ಮಟ್ಟಂ:

   ವಿನಾಶಕಾರಿ ಭೂಕುಸಿತಕ್ಕೆ ತುತ್ತಾಗಿರುವ ಕೇರಳದ ವಯನಾಡಿನಲ್ಲಿ 11 ದಿನಗಳ ಬಳಿಕ ನಾಲ್ವರ ಮೃತದೇಹಗಳು ಪತ್ತೆಯಾಗಿವೆ. ಸೂಚಿಪಾರ ಮತ್ತು ಕಂಠಪಾರ ಜಲಪಾತಗಳ ನಡುವಿನ ಪ್ರದೇಶದಿಂದ ವಶಕ್ಕೆ ಪಡೆಯಲಾದ ಮೃತದೇಹಗಳು ಕೊಳೆತ ಸ್ಥಿತಿಯಲ್ಲಿವೆ. ಅವುಗಳನ್ನು ಏರ್ ಲಿಫ್ಟ್ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ವರದಿಗಳು ತಿಳಿಸಿವೆ.

   ಸೇನೆ ಶೋಧ ಕಾರ್ಯ ಮುಗಿಸಿ ವಾಪಸ್ಸಾಗಿದೆ. ಆದರೆ ಅಗ್ನಿಶಾಮಕ ಮತ್ತು ರಕ್ಷಣಾ ಸೇವೆ, ಪೊಲೀಸರು ಮತ್ತು ಸ್ವಯಂಸೇವಕರು ಭೂ ಕುಸಿತ ಪೀಡಿತ ಪ್ರದೇಶದಲ್ಲಿ ಶೋಧವನ್ನು ಮುಂದುವರೆಸಿದ್ದಾರೆ. ಶುಕ್ರವಾರ ಪುಂಚಿರಿ ಮಟ್ಟಂ ಮತ್ತಿತರ ಪ್ರದೇಶಗಳಲ್ಲಿ ಶೋಧ ಕಾರ್ಯಾಚರಣೆಗಳು ನಡೆಯುತ್ತಿವೆ.

   ಪುಂಚಿರಿ ಮಟ್ಟಂನಲ್ಲಿ ಶೋಧ ಕಾರ್ಯಕ್ಕೆ ಅರ್ಥ್ ಮೂವರ್ಸ್ ನೆರವು ನೀಡುತ್ತಿದ್ದಾರೆ. ಜುಲೈ 30 ರಂದು ದೇವರನಾಡು ವಯನಾಡಿನಲ್ಲಿ ಸಂಭವಿಸಿದ ಭೂಕುಸಿತದಿಂದ ಇಲ್ಲಿಯವರೆಗೆ ಸುಮಾರು 230 ಜನರು ಬಲಿಯಾಗಿದ್ದಾರೆ. 

   ಅಂಬಲವಾಯಲ್‌ನಲ್ಲಿ ನಿಗೂಢ ಸದ್ದು?ಈ ಮಧ್ಯೆ ವಯನಾಡು ಜಿಲ್ಲೆಯ ಅಂಬಲವಾಯಲ್ ಪ್ರದೇಶದಲ್ಲಿ ಕೆಲವು ಸ್ಫೋಟಗಳು ವರದಿಯಾಗಿವೆ. ವಯನಾಡಿನ ಜಮ್ಶೀದ್ ಪ್ರಕಾರ, ಬೆಳಿಗ್ಗೆ 10.45 ರ ಸುಮಾರಿಗೆ ಸ್ಫೋಟಗಳು ವರದಿಯಾಗಿವೆ.

   ಭೂಮಿಯ ಕೆಳಗಿನಿಂದ ನಿಗೂಢವಾದ ಸದ್ದು ಕೇಳಿಸಿತು ಎಂದು ಸ್ಥಳೀಯ ಜನರು ಹೇಳಿದರು. ಇದು ದೃಢಪಡದೆ ಜನರಲ್ಲಿ ಗೊಂದಲ ಮೂಡಿಸಿದ್ದು, ಕಂದಾಯ ಅಧಿಕಾರಿಗಳ ಸಮ್ಮುಖದಲ್ಲಿ ಅನಪಾರ, ತಜತುವಾಯಲ್ ಮತ್ತು ಎಡಕ್ಕಲ್ ಪ್ರದೇಶದಲ್ಲಿ ವಾಸಿಸುತ್ತಿದ್ದ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಯಿತು. ಅಂಬಲವಾಯಲ್ ಜಿಎಲ್‌ಪಿ ಶಾಲೆಗೆ ರಜೆ ಘೋಷಿಸಲಾಗಿದೆ.

Recent Articles

spot_img

Related Stories

Share via
Copy link
Powered by Social Snap