ಬೆಂಗಳೂರು : ದಾಖಲೆಯಿಲ್ಲದ 3 ಕೋಟಿ ಮೌಲ್ಯದ ಚಿನ್ನಾಭರಣ ಪತ್ತೆ!!

ಬೆಂಗಳೂರು : 

     ಸೂಕ್ತ ದಾಖಲಾತಿ ಇಲ್ಲದೇ  ದ್ವಿಚಕ್ರ ವಾಹನದಲ್ಲಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಸಾಗಿಸುತ್ತಿದ್ದ ಇಬ್ಬರನ್ನು ನಗರ ಪಶ್ಚಿಮ ವಿಭಾಗದ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

     ಪೊಲೀಸ್ ಸಿಬ್ಬಂದಿ ಹನುಮಂತ ಹಾಗೂ ಆನಂದ ಅವರು ದೊಡ್ಡ ಪೇಟೆ ವೃತ್ತದ ಬಳಿ ವಾಹನ ಪರಿಶೀಲಿಸುತ್ತಿದ್ದಾಗ ಆಯಕ್ಟೀವ್ ಹೊಂಡಾ ದ್ವಿಚಕ್ರ ವಾಹನದಲ್ಲಿ ಭಾರಿ ಚಿನ್ನಾಭರಣ ಪತ್ತೆಯಾಗಿದೆ.

     ವಿಚಾರಣೆ ವೇಳೆ ನಗರ್ತ್ ಪೇಟೆಯ ಎಸ್.ಎಸ್ ಜ್ಯೂವೆಲ್ಲರ್ಸ್​ಗೆ ಸೇರಿದ ಚಿನ್ನಭಾರಣ ಎಂದು ತಿಳಿದುಬಂದಿದ್ದು, ಮುಂಬೈ ಮೂಲದ‌ ದಳಪತ್ ಸಿಂಗ್ ಹಾಗೂ ರಾಜಸ್ತಾನದ ವಿಕಾಸ್ ಎಂಬವವರ ಬಳಿ ಚಿನ್ನಾಭರಣ ಸಿಕ್ಕಿದೆ.

     ಒಟ್ಟು 6.55 ಗ್ರಾಂ ಚಿನ್ನ, 67 ನೆಕ್ಲೇಸ್ ಜಪ್ತಿಯಾಗಿದ್ದು, ಅಂದಾಜು 3 ಕೋಟಿ ರೂ. ಮೌಲ್ಯದ ಚಿನ್ನಾಭರಣಗಳು ಎನ್ನಲಾಗಿದೆ. ಜಪ್ತಿಯಾದ ಆಭರಣಗಳೆಲ್ಲ ಆಯಂಟಿಕ್​ ಪೀಸ್ ಆಗಿದ್ದು, ಮುಂಬೈನಲ್ಲಿ ತಯಾರಾಗಿರುವುದಾಗಿ ತಿಳಿದುಬಂದಿದೆ. ಮುಂಬೈನಿಂದ ಬೆಂಗಳೂರಿಗೆ ಕೊರಿಯರ್ ಮೂಲಕ ಬಂದಿತ್ತು. ಬಳಿಕ ಬೆಂಗಳೂರಿನಲ್ಲಿ ಚಿನ್ನಾಭರಣ ತೆಗೆದುಕೊಂಡು ಬ್ಯಾಗ್​ನಲ್ಲಿ ಹಾಕಿಕೊಂಡು ಅಂಗಡಿಗೆ ಹೋಗಿ ಸ್ಯಾಂಪಲ್ ತೋರಿಸ್ತಿದ್ರು. ಅಂಗಡಿಯವರು ಆರ್ಡರ್ ಕೊಟ್ರೆ ಮತ್ತೆ ತಯಾರು ಮಾಡಿ ಕೊಡುತ್ತಿದ್ದರು ಎಂದು ಪೊಲೀಸ್​ ಮೂಲಗಳು ತಿಳಿಸಿವೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap