ಗೋಲ್ಡನ್ ಚಾರಿಯಟ್ ರೈಲು ಪುನರ್ ಆರಂಭ!!?

 ಬಳ್ಳಾರಿ:

      ರಾಜ್ಯದ ಪ್ರಸಿದ್ದ ಪ್ರವಾಸಿ ತಾಣಗಳನ್ನು ಮತ್ತು ಗೋವಾವನ್ನು ಸಂಪರ್ಕ ಕಲ್ಪಿಸುವ ಉನ್ನತ ದರ್ಜೆಯ ಕರ್ನಾಟಕ ಪ್ರವಾಸೋದ್ಯಮ ಇಲಾಕೆಯ ಗೋಲ್ಡನ್ ಚಾರಿಯಟ್ ರೈಲನ್ನು ಪುನಃ ಆರಂಭಿಸಲಿದೆಂದು ರಾಜ್ಯ ರೈಲ್ವೇ ಸಚಿವ ಸುರೇಶ್ ಅಂಗಡಿ ಹೇಳಿದ್ದಾರೆ.

       ಅವರಿಂದು ಹೊಸಪೇಟೆ ಮತ್ತು‌ ಹರಿಹರ ನಡುವೆ ನೂತನ‌ ಪ್ಯಾಸಂಜರ್ ರೈಲನ್ನು ಉದ್ಘಾಟನೆ ಮಾಡಿದ ನಂತರ ಮಾತನಾಡಿ,ಪ್ರವಾಸಿಗರ ಸಂಖ್ಯೆ, ನಿರ್ವಹಣೆ ಕೊರತೆ ಸೇರಿದಂತೆ ಹಲವು‌ ಕಾರಣಗಳಿಂದ ಗೋಲ್ಡನ್ ಚಾರಿಯಟ್ ರೈಲು ಸ್ಥಗಿತಗೊಂಡಿದೆ. ಇದರಿಂದ 40 ಕೋಟಿ ರೂ ನಷ್ಟವಾಗಿದೆ ಈ ರೈಲನ್ನು ನಿಲ್ಲಿಸಲಾಗಿದೆ.

      ಆದರೆ ಪ್ರಧಾನಿ ಮೋದಿ ಅವರು ದೇಶದ 15 ಪ್ರವಾಸಿ ತಾಣಗಳನ್ನು ನೋಡಲು ದೇಶದ ಜನತೆಗೆ ಮನವಿ‌ ಮಾಡಿದ್ದಾರೆ. ಬೆಂಗಳೂರಿನಲ್ಲಿ‌ರು ಎರಡು‌ ಕೋಟಿ‌ ಜನರು ಲಕ್ಷಂತಾರ ರೂಪಾಯಿ‌ ಸಂಬಳ ತೆಗೆದುಕೊಳ್ಳುವವರು ಇದ್ದು ಅವರು ವಿದೇಶಿ ಪ್ರವಾಸಕ್ಕೆ ಹೋಗುತ್ತಾರೆ. ಅಂತಹವರಿಗೆ ಉನ್ನತ ದರ್ಜೆಯಲ್ಲಿ ದೇಶದ ಪ್ರವಾಸಿ ತಾಣಗಳನ್ನು‌ ಪರಿಚಯಿಸಲು ಉದ್ದೇಶಿಸಿದೆ. ಅದಕ್ಕಾಗಿ‌ ಉತ್ತಮ ನಿರ್ವಹಣೆಯಿಂದ ರಾಜ್ಯದ ಬೆಂಗಳೂರು, ಮೈಸೂರು, ಕೊಡಗು,ಹಂಪಿ, ವಿಜಾಪುರ, ಬಾದಮಿ, ಶ್ರವಣಬೆಳಗೊಳ ಮೊದಲಾದ ಪ್ರವಾಸಿ ತಾಣಗಳ ಜೊತೆ ಗೋವಾವನ್ನು ಗೋಲ್ಡನ್ ಚಾರಿಯಟ್ ರೈಲು ಸಂಪರ್ಕಿಸಲಿದೆ. ಉನ್ನತ ದರ್ಜೆಯ ಎಲ್ಲಾ ಸೌಲಭ್ಯಗಳನ್ನು ಹೊಂದಿರುವ ಈ ರೈಲನ್ನು ಮತ್ತೆ ಆರಂಭಿಸಲು ಮುಖ್ಯ ಮಂತ್ರಿ ಯಡಿಯೂರಪ್ಪ ಮತ್ತು ಸಚಿವ ಸಿ.ಟಿ.ರವಿ ಅವರ ಬಳಿ‌ ಮಾತನಾಡಿರುವೆ ರಾಜ್ಯ ಸರಕಾರ ಮುಂದಾಗದಿಂದರೆ ಐ ಆರ್ ಸಿಟಿಸಿ ಯಿಂದ ಕೇಂದ್ರ ಸರಕಾರ ರೈಲನ್ನು ಓಡಿಸಲಿದೆ ಎಂದು ತಿಳಿಸಿದರು.

      ದೇಶದಲ್ಲಿ ಖಾಸಗಿ ರೈಲಿನ ಓಡಾಟಕ್ಕೆ ಉತ್ತಮ ಸ್ಪಂದನೆ ದೊರೆತಿದ್ದು, ದೇಶದ ಇನ್ನಿತರ 150 ರೈಲುಗಳನ್ನು ಖಾಸಗಿಯಾಗಿ ಓಡಿಸಲು ನೀಡುವ ಚಿಂತನೆ ಇದೆ ಎಂದರು

       ಈ ಸಂದರ್ಭದಲ್ಲಿ ಸಂಸದರಾದ ಜಿ.ಎಂ.ಸಿದ್ದೇಶ, ಕರಡಿ ಸಂಗಣ್ಣ, ವೈ.ದೇವೇಂದ್ರಪ್ಪ, ಜಿಲ್ಲಾ ಬಿಜೆಪಿ ಅಧ್ಯಕ್ಷ ಚನ್ನಬಸನಗೌಡ ಮೊದಲಾದವರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link