ಬೆಂಗಳೂರು:
ರಾಷ್ಟ್ರಿಯ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳಿಗೆ ಫಾಸ್ಟ್ ಟ್ಯಾಗ್ ಕಡ್ಡಾಯವಾಗಿ ಅಳವಡಿಸಲು ನೀಡಲಾಗಿದ್ದ ಕೊನೆಯ ದಿನಾಂಕವನ್ನು ಡಿ.15ರವರೆಗೆ ವಿಸ್ತರಿಸಿ ಕೇಂದ್ರ ಸರ್ಕಾರ ಆದೇಶಿಸಿದೆ.
ಪೂರ್ವನಿಗದಿಯಂತೆ ಡಿ. 1ರಿಂದ ಫಾಸ್ಟ್ಯಾಗ್ ಮೂಲಕ ಟೋಲ್ಶುಲ್ಕ ಸಂಗ್ರಹ ಪ್ರಕ್ರಿಯೆ ಆರಂಭಿಸಬೇಕಿತ್ತು. ಆದರೆ, ವಾಹನ ಮಾಲೀಕರೆಲ್ಲರೂ ಫಾಸ್ಟ್ಯಾಗ್ ಖರೀದಿ ಮಾಡದ ಕಾರಣ, ಗಡುವು ವಿಸ್ತರಿಸಿ ಆದೇಶಿಸಲಾಗಿದೆ. ಒಂದು ವೇಳೆ ಡಿಸೆಂಬರ್ 15ರ ನಂತರವೂ ಫ್ಯಾಸ್ಟ್ ಟ್ಯಾಗ್ ಅಳವಡಿಸದ ವಾಹನಗಳಿಗೆ ಡಬಲ್ ಶುಲ್ಕ ವಿಧಿಸಲಾಗುತ್ತಿದೆ.
ದೇಶದ 457ಕ್ಕೂ ಅಧಿಕ ಟೋಲ್ ಪ್ಲಾಜಾಗಳಲ್ಲಿ ಫಾಸ್ಟ್ ಟ್ಯಾಗ್ ಇರದ ವಾಹನ ಸಂಚರಿಸಿದರೆ ದುಪ್ಪಟ್ಟು ಶುಲ್ಕ ನೀಡಬೇಕಾಗುತ್ತದೆ. ಆದರೆ ಸದ್ಯಕ್ಕೆ ‘ಹೈಬ್ರೀಡ್ ಲೇನ್’ ಮೂಲಕ ವಿನಾಯಿತಿ ನೀಡಲು ಪ್ರಾಧಿಕಾರ ನಿರ್ಧರಿಸಿದೆ. ಇದರಿಂದ ಒಂದು ಹೈಬ್ರೀಡ್ ಲೇನ್ ಹೊರತುಪಡಿಸಿ ಟೋಲ್ಪ್ಲಾಜಾದ ಉಳಿದೆಲ್ಲ ಲೇನ್ಗಳಲ್ಲಿ ಫಾಸ್ಟ್ಯಾಗ್ ಕಡ್ಡಾಯವಾಗಲಿದೆ.
ಇದರಿಂದಾಗಿ ಫಾಸ್ಟ್ಯಾಗ್ ಖರೀದಿಗೆ ವಾಹನ ಮಾಲೀಕರಿಗೆ ಮತ್ತಷ್ಟು ಅವಧಿ ದೊರೆತಂತಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
