ಬೆಳಗಾವಿ:
ಇಷ್ಟುದಿನ ಸರ್ಕಾರ ಪತನವಾಗುತ್ತದೆ ಎಂದು ಪದೇ ಪದೆ ಭವಿಷ್ಯ ಹೇಳುತ್ತಿದ್ದ ಮಾಜಿ ಸಚಿವ, ಶಾಸಕರೊಬ್ಬರು ಇದೀಗ ಮತ್ತೆ ಅದೇ ಮಾತನ್ನು ಪುನರುಚ್ಚರಿಸಿದ್ದಾರೆ.
ನಿನ್ನೆ ಹುಕ್ಕೇರಿ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಉಮೇಶ ಕತ್ತಿ ಬಜೆಟ್ ಅಧಿವೇಶನಕ್ಕೂ ಮೊದಲೇ ಸರ್ಕಾರ ಧೂಳಿಪಟವಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಆದರೆ ಸರ್ಕಾರವನ್ನು ನಾವು ಕೆಡುವುದಿಲ್ಲ ಅದಾಗಿ ಅದೆ ಪತನವಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ . ಸಿಎಂ ಎಚ್.ಡಿ.ಕುಮಾರಸ್ವಾಮಿ ರಾಜೀನಾಮೆ ನೀಡುತ್ತೇನೆ ಎಂಬ ವಾಕ್ಯವೇ ಇದಕ್ಕೆ ಮುನ್ನುಡಿ ಎಂದಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ