ಗುಬ್ಬಿ : ನೂರಾರು ಅಡಿಕೆ ಮರ ಕಡಿಸಿದ್ದ ತಹಶೀಲ್ದಾರ್ ವರ್ಗಾವಣೆ!!

ಗುಬ್ಬಿ:

     ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ತಿಪ್ಪೂರು ಗ್ರಾಮದಲ್ಲಿ ಅಡಿಕೆ ಮರ ಕಡಿಸಿದ ಗ್ರಾಮ ಲೆಕ್ಕಿಗರನ್ನು ಅಮಾನತು ಮಾಡಲಾಗಿದೆ. ತಹಶೀಲ್ದಾರ್‌ರನ್ನು ವರ್ಗಾವಣೆ ಮಾಡಲು ಆದೇಶ ನೀಡಲಾಗಿದೆ.

      ಸರ್ವೆ ನಂ.112ರಲ್ಲಿ ಉಡಿಸಲಮ್ಮ ದೇವಸ್ಥಾನಕ್ಕೆ ಸೇರಿರುವ ಜಮೀನಿನಲ್ಲಿ 5.30 ಗುಂಟೆ ಜಮೀನು ಇತ್ತು. ಇದನ್ನು ನಿರ್ವಹಿಸುತ್ತಿದ್ದ ಪೂಜಾರಿಗಳಲ್ಲಿ ಮನಸ್ತಾಪವಾಗಿ ಜಮೀನು ವಿವಾದದಲ್ಲಿತ್ತು.

     ಈ ವಿವಾದಿತ ಜಮೀನಿನಲ್ಲಿ ಬೆಳದಿದ್ದ ತೆಂಗು ಮತ್ತು ಅಡಿಕೆ ಮರಗಳನ್ನು ನೆಲಸಮ ಮಾಡಲಾಗಿತ್ತು. ಈ ಪ್ರಕರಣ ರಾಜ್ಯಾದ್ಯಾಂತ ಸುದ್ದಿಯಾಗಿತ್ತು. 

     ಈ ಘಟನೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಘಟನೆ ವಿರುದ್ಧ ತೀವ್ರ ವಿರೋಧ ವ್ಯಕ್ತವಾಗಿತ್ತು. ತಹಶೀಲ್ದಾರ್ ಹಾಗೂ ಗ್ರಾಮ ಲೆಕ್ಕಿಗ ಕೆಲಸಕ್ಕೆ ಜನರು ಆಕ್ರೋಶಗೊಂಡಿದ್ದರು. ಇದರ ಬೆನ್ನಲ್ಲೇ ಮಂಗಳವಾರವಷ್ಟೆ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಹಲವು ಸಂಘಟನೆಗಳು ಪ್ರತಿಭಟನೆ ನಡೆಸಿದ್ದರು.

      ಇದೀಗ ಈ ಘಟನೆಯ ಬಗ್ಗೆ ಕ್ರಮ ಕೈಗೊಳ್ಳಲಾಗಿದ್ದು, ಘಟನೆಗೆ ತಹಶೀಲ್ದಾರ್ ಎಂ.ಮಮತಾ, ಅಮ್ಮನಘಟ್ಟ ವೃತ್ತದ ಗ್ರಾಮ ಲೆಕ್ಕಾಧಿಕಾರಿ ಮುರಳಿ ಹಾಗೂ ಕಂದಾಯ ನಿರೀಕ್ಷಕ ರಮೇಶ್‌ ಅವರ ಅಜಾಗರೂಕತೆಯೇ ಕಾರಣ ಎಂದು ಸರಕಾರಕ್ಕೆ ಪ್ರಾಥಮಿಕ ವರದಿ ಸಲ್ಲಿಸಿದ್ದರು.

     ಎಲ್ಲಾ ಬೆಳವಣಿಗೆಗಳನ್ನು ಪರಿಶೀಲಿಸಿ ಇದೀಗ ತಹಶೀಲ್ದಾರ್ ಅವರನ್ನು ವರ್ಗಾವಣೆ ಮಾಡಲಾಗಿದೆ ಎಂದು ಕಂದಾಯ ಸಚಿವರಾದ ಆರ್.ಅಶೋಕ್ ತಿಳಿಸಿದ್ದಾರೆ.

     ತಹಶೀಲ್ದಾರ್ ಮಮತಾರನ್ನು ಗುಬ್ಬಿಯಿಂದ ಬೇರೊಂದು ಕಡೆ ವರ್ಗಾವಣೆ ಮಾಡಿದ್ದು, ಈ ಹಿಂದೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ(ಮಂಗಳವಾರ)  ಗ್ರಾಮ ಲೆಕ್ಕಿಗರನ್ನು ಅಮಾನತು ಮಾಡಲಾಗಿತ್ತು.

      ಗುಬ್ಬಿ ತಾಲೂಕಿನ ಕಸಬ ಹೋಬಳಿಯ ತಿಪ್ಪೂರಿನಲ್ಲಿ ನಡೆದ ಈ ಘಟನೆ ರಾಜ್ಯದಲ್ಲಿ ಭಾರಿ ವಿವಾದಕ್ಕೆ ಕಾರಣವಾಗಿತ್ತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap