ಹಫ್ತಾ ವಸೂಲಿಯ ಪ್ರಕರಣದಲ್ಲಿ ಫೈಲ್ವಾನ್‍ ಬಂಧನ

ಬೆಂಗಳೂರು

         ರೌಡಿಗಳ ವಿರುದ್ದದ ಕಾರ್ಯಾಚರಣೆಯನ್ನು ಮುಂದುವರೆಸಿರುವ ಸಿಸಿಬಿ ಪೊಲೀಸರು ಹಫ್ತಾ ವಸೂಲಿ ಮಾಡಿ ಬೆದರಿಕೆ ಹಾಕುತ್ತಿದ್ದ ರೌಡಿ ಇಶ್ತಿಯಾಕ್ ಅಹಮದ್ ಅಲಿಯಾಸ್ ಫೈಲ್ವಾನ್‍ನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ.
ರೌಡಿ ಫೈಲ್ವಾನ್ ಡಿಜೆ ಹಳ್ಳಿ, ಶಿವಾಜಿನಗರ ಇನ್ನಿತರ ಕಡೆಗಳಲ್ಲಿ ಹಫ್ತಾ ವಸೂಲಿಗಿಳಿದಿದ್ದರು ಎಂಬ ದೂರುಗಳ ಹಿನ್ನಲೆಯಲ್ಲಿ ಮಂಗಳವಾರ ಕಾರ್ಯಾಚರಣೆ ನಡೆಸಿ ಫೈಲ್ವಾನ್ ಸೇರಿ ಇಬ್ಬರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗುತ್ತದೆ ಎಂದು ಸಿಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

            ಹಫ್ತಾ ವಸೂಲಿಯ ಪ್ರಕರಣದಲ್ಲಿ ಮಾತ್ರ ಫೈಲ್ವಾನ್‍ನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿ ಆತನ ಮನೆ ಕಚೇರಿಯನ್ನು ತಪಾಸಣೆ ನಡೆಸಲಾಗಿದೆ ತಪಾಸಣೆಯಲ್ಲಿ ಆುಂಬಿಡೆಂಟ್ ಕಂಪನಿ ಬಗ್ಗೆ ಇದುವರೆಗೂ ಯಾವುದೇ ಮಾಹಿತಿ ಸಿಕ್ಕಿಲ್ಲ. ಒಂದು ವೇಳೆ ಸಿಕ್ಕಿದರೆ ಅದರ ಆಯಾಮದಲ್ಲೂ ನಾವು ತನಿಖೆ ನಡೆಸುತ್ತೇವೆ ಎಂದು ಹೇಳಿದ್ದಾರೆ. ರೌಡಿ ಫೈಲ್ವಾನ್ ಪತ್ನಿ ಫರೀದಾ ಪಾಲಿಕೆ ಸದಸ್ಯರಾಗಿದ್ದಾರೆ.

ಎನ್‍ಡಿಆರ್‍ಎಫ್ ಸ್ಥಾಪನೆ:

         ರಾಜ್ಯದಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‍ಡಿಆರ್‍ಎಫ್)ಯನ್ನು ರಾಜ್ಯದಲ್ಲಿ ಆರಂಭಿಸುವ ಸಲುವಾಗಿ ಭೂಸ್ವಾಧೀನ ಪ್ರಕ್ರಿಯೆಗೆ ಚಾಲನೆ ದೊರೆತಿದೆ

          ಚೆನ್ನೈನಲ್ಲಿ ಕೇಂದ್ರ ಕಚೇರಿ ಹೊಂದಿರುವ ಎನ್‍ಡಿಆರ್‍ಎಫ್‍ನ ಶಾಖೆಯನ್ನು ಯಲಹಂಕದ ಬಳಿ ಆರಂಭಿಸುವ ಪ್ರಕ್ರಿಯೆ ಆರಂಭಗೊಂಡಿದ್ದು,ಭೂಸ್ವಾಧೀನ ಪೂರ್ಣಗೊಂಡು ಕಟ್ಟಡ ನಿರ್ಮಾಣ ಮಾಡಿ ಮುಂದಿನ ಎರಡು ವರ್ಷಗಳಲ್ಲಿ ಎನ್‍ಡಿಆರ್ ಎಫ್‍ಕಾರ್ಯಾರಂಭ ಮಾಡಲಿದೆ ಎಂದು ಮೂಲಗಳು ತಿಳಿಸಿವೆ.

           ಎನ್‍ಡಿಆರ್‍ಎಫ್ ಶಾಖೆ ಆರಂಭದಿಂದ ಈವರೆಗೆ ರಾಜ್ಯದಲ್ಲಿ ಏನಾದರೂ ವಿಪತ್ತು ಸಂಭವಿಸಿದರೆ ಆರು ಗಂಟೆಗಳ ಕಾಲ (ಎನ್‍ಡಿಆರ್‍ಎಫ್ ಕಾಯಬೇಕಾಗಿರುವ ಸ್ಥಿತಿ ನಿವಾರಣೆಗೊಂಡು ಕೇವಲ ಅರ್ಧ ಗಂಟೆಯೊಳಗೆ ಎನ್‍ಡಿಆರ್‍ಎಫ್‍ನ ಸೇವೆ ದೊರೆಯಲಿದೆ.

         ಯಲಹಂಕದಲ್ಲಿರುವ ಗಡಿ ಭದ್ರತಾ ಪಡೆಯ ಪಕ್ಕದಲ್ಲೇ ಎನ್‍ಡಿಆರ್‍ಎಫ್ ಶಾಖೆಯ ಆರಂಭಿಸಲು ಭೂಸ್ವಾಧೀನ ನಡೆಸಲಾಗುತ್ತಿದ್ದು ಇದರಿಂದ ಸಹಜವಾಗಿ ಹತ್ತಿರದಲ್ಲಿರುವ ವಿಮಾನ ನಿಲ್ದಾಣದ ಸುರಕ್ಷತೆಗೆ ಮತ್ತಷ್ಟು ಬಲ ಬರಲಿದೆ ಎಂದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಸ್ಥೆ ವಕ್ತಾರರು ತಿಳಿಸಿದ್ದಾರೆ.

         

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

Recent Articles

spot_img

Related Stories

Share via
Copy link