ಬೆಂಗಳೂರು :
ಬಿಜೆಪಿಯವರು ನಮ್ಮ ಮನೆಗೆ ಬಂದು 5 ಕೋಟಿ ರೂ. ತಂದು ಕೊಟ್ಟಿದ್ದರು ಎಂದು ಕೋಲಾರ ಜೆಡಿಎಸ್ ಶಾಸಕ ಶ್ರೀನಿವಾಸ್ ಗೌಡ ನೇರ ಆರೋಪ ಮಾಡಿದರು.
ಸ್ಪೀಕರ್ ರಮೇಶ್ ಕುಮಾರ್ ರಾಜಕೀಯ ಹೊಲಸು ತನಕ್ಕೆ ಸದನದಲ್ಲಿ ಕಣ್ಣೀರಿಟ್ಟ ವೇಳೆ ಮಧ್ಯ ಪ್ರವೇಶ ಮಾಡಿದ ಶಾಸಕ ಶ್ರೀನಿವಾಸ ಗೌಡ ಅವರು, ಅಧ್ಯಕ್ಷರೇ ಬಿಜೆಪಿಯ ಮಲ್ಲೇಶ್ವರಂ ಶಾಸಕ ಅಶ್ವತ್ ನಾರಾಯಣ, ಚೆನ್ನಪಟ್ಟಣದ ಮಾಜಿ ಶಾಸಕ ಸಿಪಿ ಯೋಗೀಶ್ವರ್ ಹಾಗು ವಿಶ್ವನಾಥ್ ಯಲಹಂಕದವರು. ಬೆಂಗಳೂರಿನಲ್ಲಿರುವ ನಮ್ಮ ಮನೆಗೆ 5 ಕೋಟಿ ತಂದು ಕೊಟ್ಟರು. ನಾನು ತಗೊಳ್ಳೋದಿಲ್ಲ ಎಂದರೂ ಮನೆಗೆ ತಂದು ಇಟ್ಟು ಹೋದರು ಎಂದು ಶಾಸಕ ಶ್ರೀನಿವಾಸ್ ಗೌಡ ಸ್ಪೋಟಕ ಬಾಂಬ್ ಅನ್ನು ಸದನದಲ್ಲಿ ಸಿಡಿಸಿದ್ದಾರೆ.
ಶ್ರೀನಿವಾಸಗೌಡ ಅವರ ಹೇಳಿಕೆಗೆ ಕಲಾಪದಲ್ಲಿ ಕೋಲಾಹಲ ಏರ್ಪಟ್ಟಿತು. ಅಷ್ಟೇ ಅಲ್ಲ, ಈ ಬಗ್ಗೆ ತನಿಖೆ ನಡೆಯಬೇಕೆಂದು ಕಾಂಗ್ರೆಸ್ ನಾಯಕರು ಆಗ್ರಹಿಸಿದರು. ಸಚಿವ ಡಿ.ಕೆ. ಶಿವಕುಮಾರ್ ಮತ್ತೆ ಶ್ರೀನಿವಾಸಗೌಡ ಅವರ ಆರೋಪಕ್ಕೆ ಸಂಬಂಧಿಸಿದಂತೆ ಧ್ವನಿ ಎತ್ತಿದರಲ್ಲದೆ, ಎಲ್ಲರಿಗೂ ಚರ್ಚೆಗೆ ಅವಕಾಶ ಮಾಡಿಕೊಡಬೇಕು. ಯಾರಿಗೆ ಎಷ್ಟು ಹಣ ಕೊಟ್ಟಿದ್ದಾರೆ ಹೇಳಬೇಕು ಎಂದು ಆಗ್ರಹಿಸಿದರು. ಈ ವೇಳೆ ಬಿಜೆಪಿ ಶಾಂತವಾಗಿ ಕುಳಿತಿರುವುದಕ್ಕೂ ಕಾಂಗ್ರೆಸ್ ನಾಯಕರು ಛೇಡಿಸಲಾರಂಭಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ