ರಾಮನಗರ :
ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ನೀಡಿದ್ದ ಹೇಳಿಕೆ ಬಗ್ಗೆ ಮಿಣಿಮಿಣಿ ಪೌಡರ್ ಪದ ಬಳಸಿಕೊಂಡು ಕಳೆದ ಎರಡು ಮೂರು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಆಗುತ್ತಿದೆ. ಇದಕ್ಕೆ ಎಚ್.ಡಿ.ಕೆ ಆಕ್ರೋಶ ವ್ಯಕ್ತಪಡಿಸಿದ್ದು, ಇದು ಬಿಜೆಪಿ ಕಾರ್ಯಕರ್ತರ ವಿಕೃತ ಮನೋಭಾವವನ್ನು ತೋರಿಸುತ್ತದೆ ಎಂದು ಕಿಡಿಕಾರಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಜೀವನದಲ್ಲಿ ತಪ್ಪುಗಳನ್ನ ಮಾಡಿಲ್ಲ. ತಪ್ಪು ಮಾಡಿದರೆ ಓಪನ್ ಆಗಿ ಹೇಳುವ ಮನುಷ್ಯ ನಾನು. ನನ್ನ ಬಗ್ಗೆ ಕೀಳಾಗಿ ವೈರಲ್ ಮಾಡುತ್ತಿದ್ದಾರೆ. ಅದು ಬಿಜೆಪಿಯವರ ಸಂಸ್ಕೃತಿ. ನಾನು ಏನು ಅಂತ ಜನ ನೋಡಿದ್ದಾರೆ. ನನ್ನ ಬಗ್ಗೆ ಇವರು ಪ್ರಮಾಣ ಪತ್ರ ನೀಡುವ ಅವಶ್ಯಕತೆ ಇಲ್ಲ ಎಂದು ಹರಿಹಾಯ್ದರು.
ಮಂಗಳೂರು ಬಾಂಬ್ ಸ್ಪೋಟ ಪ್ರಕರಣದಲ್ಲಿ ಆರೋಪಿಯೇ ಸಲ್ಫರ್ ಪೌಡರ್ ಇಟ್ಟಿರುವುದಾಗಿ ತಿಳಿಸಿದ್ದಾರೆ. ಅಧಿಕಾರಿಗಳು ಎಡವಿದ್ದಾರೆಂದು ಹೇಳಿದ್ದಾರೆ. ಬಾಂಬ್ ಪ್ರಕರಣದಲ್ಲಿ ಮಾಧ್ಯಮಗಳನ್ನು ದಾರಿತಪ್ಪಿಸಲಾಯಿತು ನಾನು ಕಥೆ ಕಟ್ಟಿಲ್ಲ, ವರದಿ ಮೇಲೆ ಹೇಳಿಕೆ ನೀಡಿದ್ದೇನೆ. ಈ ಬಗ್ಗೆ ವಿಧಾನಸಭೆಯಲ್ಲೂ ಚರ್ಚಿಸುತ್ತೇನೆ. ರಾಜ್ಯದಲ್ಲಿ ಹುಡುಗಾಟಿಕೆಗೆ ಸರ್ಕಾರ ನಡೆಸಬಾರದು ಎಂದು ಕುಮಾರಸ್ವಾಮಿ ಕಿಡಿಕಾರಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ