ಬೆಂಗಳೂರಿನ ಹಲವೆಡೆ ಗುಡುಗು ಸಹಿತ ಭಾರಿ ಮಳೆ!!!

ಬೆಂಗಳೂರು: 

      ನಗರದಲ್ಲಿ ಮುಂಗಾರು ಪೂರ್ವ ಮಳೆ ತನ್ನ ಆರ್ಭಟವನ್ನು ಮುಂದುವರಿಸಿದ್ದು, ಇಂದು ಮಧ್ಯಾನದಿಂದಲೇ ಆಲಿಕಲ್ಲು ಸಹಿತ ಭಾರೀ ಮಳೆಯಾಗಿದೆ.  

      ಜೋರಾದ ಗಾಳಿಯೊಂದಿಗೆ ಮಧ್ಯಾಹ್ನಮಳೆ ಸುರಿದ ಪರಿಣಾಮ ವಾಹನ ಸವಾರರು ಸಂಚಾರ ಸಾಧ್ಯವಾಗದೆ ಪರದಾಡಬೇಕಾಗಿದೆ. ಕೋರಮಂಗಲ, ವಿಧಾನಸೌಧ, ವಿಲ್ಸನ್‌ ಗಾರ್ಡನ್‌, ಶಾಂತಿನಗರ ರಿಚ್‌ಮಂಡ್‌ ಟೌನ್‌ ಸೇರಿದಂತೆ ಭಾರೀ ಪ್ರಮಾಣದಲ್ಲಿ ಆಲಿಕಲ್ಲುಸಹಿತ ಮಳೆ ಬಿದ್ದಿದೆ.

      ರಸ್ತೆಗಳಲ್ಲಿ ಭಾರೀ ಪ್ರಮಾಣದ ನೀರು ನಿಂತಿದ್ದು, , ವಾಹನ ಸವಾರರು ಸಮಸ್ಯೆಗೆ ಸಿಲುಕಿದ್ದಾರೆ. ಸಂಚಾರ ಸಹ ಕೆಲವೆಡೆ ಅಸ್ತವ್ಯಸ್ಥಗೊಂಡಿದೆ.

      ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ನಗರದಲ್ಲಿ ಇನ್ನೂ ಕೆಲವು ದಿನ ಮಳೆ ಹೀಗೆಯೇ ಮುಂದುವರೆಯಲಿದೆ. ಇಂದು ರಾತ್ರಿಯೂ ಸಹ ಮಳೆ ಆಗುವ ಸಂಭವ ಇದೆ ಎನ್ನಲಾಗಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

Recent Articles

spot_img

Related Stories

Share via
Copy link