ಭಾರೀ ಮಳೆಗೆ 21 ಬಲಿ : ಕೇರಳದಲ್ಲಿ ರೆಡ್ ಅಲರ್ಟ್ ಘೋಷಣೆ!!!

ತಿರುವನಂತಪುರಂ: 

      ಕೇರಳದಲ್ಲಿ ಕಳೆದ ವರ್ಷದಂತೆ ಈ ವರ್ಷವೂ ಸಹಾ ಭಾರಿ ಮಳೆ ಉಂಟಾಗಿದ್ದು, ಪ್ರವಾಹದ ರೆಡ್ ಅಲರ್ಟ್‌ನ್ನು ಹವಾಮಾನ ಇಲಾಖೆ ಘೋಷಿಸಿದೆ. 

      ಕೇರಳದಲ್ಲಿ ಕಳೆದ ಎರಡು ವಾರಗಳಲ್ಲಿ ಮಳೆಯಿಂದ 21 ಮಂದಿ ಮೃತಪಟ್ಟಿದ್ದು, 13 ನಿರಾಶ್ರಿತರ ವಸತಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ತಮಿಳುನಾಡಿನ ಮೂವರು ಸೇರಿದಂತೆ ನಾಲ್ವರು ಮೀನುಗಾರರು ನಾಪತ್ತೆಯಾಗಿದ್ದಾರೆ. ಕಾಸರಗೂಡು ಜಿಲ್ಲೆಯ ಕೂಡ್ಲುವಿನಲ್ಲಿ ಶನಿವಾರದವರೆಗೆ 30 ಸೆಂ.ಮೀ ಮಳೆ ದಾಖಲಾಗಿದೆ.

      ಮೀನುಗಾರಿಕೆಗೆ ಹೋಗಿದ್ದ ಕೋಶಿ ವರ್ಗೀಸ್ (53) ಅವರು ತಿರುವಲ್ಲ ಬಳಿಯ ಮಣಿಮಲ ನದಿಗೆ ಜಾರಿ ಮೃತಪಟ್ಟಿದ್ದಾರೆ. ಕೊಲ್ಲಂನಲ್ಲಿ ತೆಂಗಿನ ಮರ ಬಿದ್ದು ದಿಲೀಪ್ ಕುಮಾರ್ (54) ಎಂಬುವರು ಸತ್ತಿದ್ದಾರೆ ಎಂದು ಕೇರಳ ರಾಜ್ಯ ವಿಪತ್ತು ನಿರ್ವಹಣಾ ಮೂಲಗಳು ತಿಳಿಸಿವೆ.

      ಮುಂಜಾಗ್ರತಾ ಕ್ರಮವಾಗಿ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಕಣ್ಣೂರು, ಕಾಸರಗೋಡಿನಲ್ಲಿ ರೆಡ್ ಅಲರ್ಟ್ ಹಾಗೂ ಕೋಳಿಕ್ಕೊಡ್, ಮಲಪ್ಪುರಂ, ವಯನಾಡ್ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್, ಪಾಲಕ್ಕಡ್‌, ತ್ರಿಶುರ್, ಎರ್ನಾಕಯಲಮ್, ಇಡುಕ್ಕಿಯಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. 

      ಮುಂದಿನ ಕೆಲ ಗಂಟೆಗಳಲ್ಲಿ ವಿಪರೀತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ತಗ್ಗು, ಕರಾವಳಿ ಪ್ರದೇಶದಲ್ಲಿರುವ ಮಂದಿಯನ್ನು ಸ್ಥಳಾಂತರಿಸಲಾಗಿದೆ. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap